alex Certify ಅಪ್ಪ ಬೈಕ್ ಕೊಡಿಸಿಲ್ಲ ಎಂದು ನೊಂದ ಯುವಕ ಆತ್ಮಹತ್ಯೆಗೆ ಶರಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪ ಬೈಕ್ ಕೊಡಿಸಿಲ್ಲ ಎಂದು ನೊಂದ ಯುವಕ ಆತ್ಮಹತ್ಯೆಗೆ ಶರಣು

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಯುವಕ, ಯುವತಿಯರು ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳನ್ನು ಕೈಗೊಂಡು ಬುದಕನ್ನೇ ಕೊನೆಗಾಣಿಸಿಕೊಳ್ಳುತ್ತಿರುವುದು ದುರಂತ. ಇಲ್ಲೋರ್ವ ಯುವಕ ತನಗೆ ಅಪ್ಪ ಬೈಕ್ ಕೊಡಿಸಿಲ್ಲ ಎಂಬ ಕಾರಣಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ನ್ಯಾಮತಿ ಪಟ್ಟಣದ 20 ವರ್ಷದ ವಿಕಾಸ್.ಆರ್ ಆತ್ಮಹತ್ಯೆಗೆ ಶರಣಾಗಿರುವ ಯುವಕ. ಹಲವು ದಿನಗಳಿಂದ ವಿಕಾಸ್ ತನ್ನ ತಂದೆಗೆ ಬೈಕ್ ಕೊಡಿಸುವಂತೆ ಕೇಳುತ್ತಿದ್ದ. ಹಣದ ಸಮಸ್ಯೆಯಿಂದ ಮಗನಿಗೆ ಬೈಕ್ ಕೊಡಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ತಂದೆಯ ಮೇಲೆ ಮುನಿಸಿಕೊಂಡಿದ್ದ ಯುವಕ ಬರಬರುತ್ತಾ ಮನೆಯವರೊಂದಿಗೆ ಮಾತನಡುವುದನ್ನು ನಿಲ್ಲಿಸಿದ್ದನಂತೆ. ಬೈಕ್ ವಿಚಾರವಾಗಿಯೇ ಮಾನಸಿಕವಾಗಿ ನೊಂದ ಯುವಕ ಸರಿಯಾಗಿ ಊಟವನ್ನೂ ಮಾಡುತ್ತಿರಲಿಲ್ಲ ಎನ್ನಲಾಗಿದೆ.

ಒಂದು ವಾರದ ಹಿಂದೆ ಮನೆ ಬಿಟ್ಟು ಹೋಗಿದ್ದ ಯುವಕ ಸಂಬಂಧಿಕರ ಮನೆಯಲ್ಲಿ ಇದ್ದನಂತೆ ಇದೀಗ ಅಲ್ಲಿಯೇ ವಿಷ ಸೇವಿಸಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಯುವಕನನ್ನು ನ್ಯಾಮತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಹಾಗೂ ಶಿವಮೊಗ್ಗ ಆಸ್ಪತ್ರೆಗಳಿಗೂ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...