
ಕೋಲಾರ: ಹಣಕಾಸಿನ ವಿಚಾರವಾಗಿ ಗಲಾಟೆಯ ವೇಳೆ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ಕೋಲಾರದ ಶಾರದಾ ಟಾಕೀಸ್ ಬಳಿ ನಡೆದಿದೆ.
ಕೋಲಾರದ ಭವಾನಿ ನಗರದ ಸುನಿಲ್ ಕುಮಾರ್ ಗೆ ಚಾಕುವಿನಿಂದ ಇರಿಯಲಾಗಿದೆ. ಸುಮನ್ ಗೆ ಚಾಕು ಇರಿಯಲು ಯತ್ನಿಸಿದ ವೇಳೆ ಸುನಿಲ್ ಅಡ್ಡ ಬಂದಿದ್ದಾನೆ. ಈ ವೇಳೆ ಚಾಕುವಿನಿಂದ ಇರಿಯಲಾಗಿದೆ. ಚಾಕು ಇರಿಯಲು ಬಂದಿದ್ದ ರಾಹುಲ್ ಮತ್ತು ಕೃಷ್ಣೋಜಿರಾವ್ ಅವರಿಗೂ ಗಾಯಗಳಾಗಿವೆ. ಗಲಾಟೆಯ ನಂತರ ಸ್ಥಳದಿಂದ ರಾಹುಲ್ ಮತ್ತು ಸುಮನ್ ಪರಾರಿಯಾಗಿದ್ದಾರೆ. ಗಾಯಗೊಂಡ ಸುನಿಲ್, ಕೃಷ್ಣೋಜಿರಾವ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಲಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.