ಬೆಂಗಳೂರು: ಯುವಕನೊಬ್ಬನನ್ನು ದುಷ್ಕರ್ಮಿಗಳು ನಡು ರಸ್ತೆಯಲ್ಲಿಯೇ ಕೊಚ್ಚಿ ಕೊಲೆಗೈದಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮರಸೂರು ಗ್ರಾಮದಲ್ಲಿ ನಡೆದಿದೆ.
ವಿಜಯ್ ಕುಮಾರ್ (27) ಕೊಲೆಯಾದ ಯುವಕ. ಹಳೆ ವೈಷಮ್ಯಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
2017ರಲ್ಲಿ ನಡೆದಿದ್ದ ಮನೋಜ್ ಅಲಿಯಾಸ್ ಬಬ್ಲು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ವಿಜಯ್ ಕುಮಾರ್ ಐದು ವರ್ಷ ಜೈಲಿನಲ್ಲಿದ್ದ. 8 ತಿಂಗಳ ಹಿಂದೆ ಬಿಡುಗಡೆಯಾಗಿ ಬಂದಿದ್ದ. ಮನೋಜ್ ಹಾಗೂ ಸಹಚರರು ವಿಜಯ್ ಕುಮಾರ್ ನನ್ನು ಕರೆದೊಯ್ದು ನಡುರಸ್ತೆಯಲ್ಲಿ ಹತ್ಯೆ ಮಾಡಿದ್ದಾರೆ.
ಮನೋಜ್ ಕುಮಾರ್ ಸಹೋದರ ಅರ್ಜುನ್ ಎಂಬಾತ ತನ್ನ ಮಗನನ್ನು ಕೊಲೆ ಮಾಡಿದ್ದಾಗಿ ವಿಜಯ್ ಕುಮಾರ್ ತಂದೆ ಆರೋಪಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.