
ಮೈಸೂರು: ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಮೈಸೂರಿನ ಉದಯಗಿರಿ ವ್ಯಾಪ್ತಿಯಲ್ಲಿ ನಡೆದಿದೆ.
18 ವರ್ಷದ ಯುವಕ ಅರ್ಬಾಜ್ ಖಾನ್ ಮೃತ ವ್ಯಕ್ತಿ. ಗುರಾಯಿಸಿದ್ದಕ್ಕೆ ಯುವಕರ ನ್ಡುವೆ ಗಲಾಟೆ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದ್ದು ಯುವಕರ ಗುಂಪು ಅರ್ಬಾಜ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ.
ಗಲಾಟೆಯಲ್ಲಿ ಪ್ರಮುಖ ಆರೋಪಿ ಶಹಬಾಜ್ ಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.