
ಕಾರವಾರ: ಮೀನು ಹಿಡಿಯಲೆಂದು ನದಿಗೆ ಇಳಿದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರು ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ತಂಡ್ರಕುಳಿ ಗ್ರಾಮದಲ್ಲಿ ನಡೆದಿದೆ.
21 ವರ್ಷದ ಮಣಿಕಂಠ ಮೃತ ದುರ್ದೈವಿ. ಕೋಡ್ಕಳೆ ಬಳಿ ಅಘನಾಶಿನಿ ನದಿಯಲ್ಲಿ ಮೀನು ಹಿಡಿಯಲೆಂದು ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ.
ನದಿಯಲ್ಲಿ ತೇಲುತ್ತಿದ್ದ ಯುವಕನ ಶವ ಕಂಡ ಮೀನುಗರರ ತಂಡ ಯುವಕನ ಮೃತದೇಹವನ್ನು ನದಿ ತಟಕ್ಕೆ ಎಳೆದು ತಂದಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರನ ದಾಖಲಾಗಿದೆ.