ಹೆಣ್ಣಿಗೆ ನಾಚಿಕೆಯೇ ಆಭರಣ ಅನ್ನೋ ಮಾತಿದೆ. ಸಾಮಾನ್ಯವಾಗಿ ಯುವತಿಯರು ತಮ್ಮ ಹೃದಯದಲ್ಲಿರೋ ರಹಸ್ಯವನ್ನು ಸುಲಭಕ್ಕೆ ಬಿಟ್ಟುಕೊಡುವುದಿಲ್ಲ. ಅವರ ಮನಸ್ಸಿನಲ್ಲೇನಿದೆ ಅನ್ನೋದನ್ನು ಅರ್ಥಮಾಡಿಕೊಳ್ಳೋದು ಬಹಳ ಕಷ್ಟ.
ಹುಡುಗಿಯ ಹೃದಯ ಗೆಲ್ಲುವುದು ಅಷ್ಟು ಸುಲಭವಲ್ಲ. ಅವರ ಮನಸ್ಸಿನಲ್ಲಿ ಸ್ಥಾನ ಸಿಗಬೇಕು ಅಂದ್ರೆ ಕೆಲವೊಂದು ಗುಣಲಕ್ಷಣಗಳು ನಿಮ್ಮಲ್ಲಿರಬೇಕು. ಯುವತಿಯರು ಯಾವ ರೀತಿಯ ಹುಡುಗರನ್ನು ಇಷ್ಟಪಡ್ತಾರೆ ಅನ್ನೋದನ್ನು ತಿಳಿದುಕೊಳ್ಳಬೇಕು.
ಹಾಸ್ಯದ ಸ್ವಭಾವ : ಹಸೀ ತೋ ಫಸಿ ಅನ್ನೋ ಸಿನೆಮಾದ ಹೆಸರನ್ನು ಕೇಳಿರಬೇಕಲ್ಲ. ಅದೇ ರೀತಿ ಲವಲವಿಕೆಯಿಂದ ಕೂಡಿರುವ, ತಮ್ಮ ಸಂಗಾತಿಯ ಮುಖದಲ್ಲಿ ನಗು ತರಿಸುವ ಹುಡುಗರನ್ನು ಯುವತಿಯರು ಇಷ್ಟಪಡುತ್ತಾರೆ. ಯಾವಾಗಲೂ ಸಮಸ್ಯೆಯಲ್ಲಿ ಸಿಲುಕಿಕೊಂಡಿರುವವರು, ಖಿನ್ನತೆಯಲ್ಲಿರುವ ಹುಡುಗರಿಂದ ಅವರು ದೂರವಿರುತ್ತಾರೆ.
ಅಧಿಕಾರ ಚಲಾಯಿಸುವಂತಿಲ್ಲ : ತಮ್ಮ ಮೇಲೆ ಯಾರೂ ಅಧಿಕಾರ ಚಲಾಯಿಸುವುದು ಯುವತಿಯರಿಗೆ ಇಷ್ಟವಾಗುವುದಿಲ್ಲ. ತಮ್ಮ ನೋಟ, ಬಟ್ಟೆ, ಸ್ವಭಾವದಂತಹ ವಿಷಯಗಳ ಬಗ್ಗೆ ಕಮೆಂಟ್ ಮಾಡಿದ್ರೆ ಅದನ್ನು ಹುಡುಗಿಯರು ದ್ವೇಷಿಸ್ತಾರೆ. ನೀವೇನಾದ್ರೂ ಈ ಸ್ವಭಾವ ಹೊಂದಿದ್ರೆ ಅದನ್ನು ಬದಲಾಯಿಸಿಕೊಳ್ಳಿ.
ಗೌರವ ಕೊಡಬೇಕು : ಗೌರವದಿಂದ ಮಾತನಾಡುವ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ. ಅವನ ಸಕಾರಾತ್ಮಕ ಸ್ವಭಾವವು ಹುಡುಗಿಗೆ ಇಷ್ಟವಾಗುತ್ತದೆ. ಮಹಿಳೆಯರನ್ನು ಅಗೌರವದಿಂದ ಕಂಡರೆ ಅದು ಇಷ್ಟವಾಗುವುದಿಲ್ಲ. ಹಾಗೇನಾದ್ರೂ ಮಾಡಿದ್ರೆ ಅಂಥವರ ಬಗ್ಗೆ ಯುವತಿಯ ಅನಿಸಿಕೆಯೇ ಹಾಳಾಗಬಹುದು.
ಆತ್ಮವಿಶ್ವಾಸ : ಹುಡುಗಿಯರು ತಮ್ಮ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಹುಡುಗರನ್ನು ಇಷ್ಟಪಡುತ್ತಾರೆ. ಇದು ಅವರ ಆತ್ಮವಿಶ್ವಾಸವನ್ನು ತೋರಿಸುತ್ತದೆ. ಮಾತನಾಡುವಾಗ ನಾಚಿಕೆಪಡುವ ಅಥವಾ ಅವರ ದೃಷ್ಟಿ ತಪ್ಪಿಸಿ ಮಾತನಾಡುವ ಹುಡುಗರು, ಹುಡುಗಿಯರ ಹೃದಯದಲ್ಲಿ ಸ್ಥಾನ ಪಡೆಯುವುದಿಲ್ಲ.
ಸರ್ಪ್ರೈಸ್ ಕೊಡಬೇಕು : ಇದನ್ಯಾರೂ ಬಾಯ್ಬಿಟ್ಟು ಕೇಳುವುದಿಲ್ಲ. ಆದ್ರೆ ಸರ್ಪೈಸ್ ಕೊಟ್ಟರೆ ಹುಡುಗಿಯರಿಗೆ ತುಂಬಾನೇ ಇಷ್ಟವಾಗುತ್ತದೆ. ಸಂಬಂಧವನ್ನು ಸುಧಾರಿಸಲು ನೀವು ಬಯಸಿದರೆ, ಹುಡುಗಿಯರು ತುಂಬಾ ಮೆಚ್ಚಿಕೊಳ್ಳುವ ವಸ್ತುಗಳನ್ನು ಆಗಾಗ ಉಡುಗೊರೆಯಾಗಿ ನೀಡುತ್ತಿರಿ.