ಭಾರತೀಯರು ಈಗ ತಮ್ಮ ಜುಗಾಡ್‌ಗೆ ವಿಶ್ವಪ್ರಸಿದ್ಧರಾಗಿದ್ದಾರೆ ಎಂಬುದರ ಬಗ್ಗೆ ಯಾವುದೇ ಸಂದೇಹವಿಲ್ಲ. ಅದೇ ರೀತಿಯ ನಿದರ್ಶನಗಳು ಇಂಟರ್ನೆಟ್‌ನಲ್ಲಿವೆ ಮತ್ತು ಅಂತಹ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಸ್ಥಳೀಯ ಕ್ರಿಕೆಟ್ ಪಂದ್ಯಕ್ಕೆ ಕಾಮೆಂಟರಿ ಮಾಡಲು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಪೀಕರ್ ಆಗಿ ಬಳಸುವ ವ್ಯಕ್ತಿಯ ವಿಡಿಯೋ ಇದಾಗಿದೆ. ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಅವರು ಕ್ಲಿಪ್ ಅನ್ನು ಮರುಟ್ವೀಟ್ ಮಾಡಿದ್ದು, ಖುದ್ದು ಅವರೇ ಅಚ್ಚರಿಗೊಂಡಿದ್ದಾರೆ.
ಈಗ ವೈರಲ್ ಆಗಿರುವ ವಿಡಿಯೋವನ್ನು ಮೂಲತಃ ಬಿಕಾಶ್ ಬೆಹೆರಾ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ನ ಶೀರ್ಷಿಕೆಯ ಪ್ರಕಾರ, ಘಟನೆ ಒಡಿಶಾದ ಕಟಕ್‌ನಲ್ಲಿ ನಡೆದಿದೆ. 28 ಸೆಕೆಂಡುಗಳ ಕ್ಲಿಪ್‌ನಲ್ಲಿ, ಕೆಲವು ಪುರುಷರು ಕ್ರಿಕೆಟ್ ಆಡುತ್ತಿದ್ದ ಮೈದಾನದಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಿಲ್ಲಿಸಿರುವುದನ್ನು ಕಾಣಬಹುದು. ಬ್ಲೂಟೂತ್ ಮೂಲಕ ಸ್ಕೂಟರ್‌ಗೆ ಸಂಪರ್ಕ ಕಲ್ಪಿಸಿದ ಮೊಬೈಲ್ ಫೋನ್ ಕೈಯಲ್ಲಿ ಹಿಡಿದುಕೊಂಡು ವ್ಯಕ್ತಿಯೊಬ್ಬ ವಾಹನದ ಪಕ್ಕದಲ್ಲಿ ನಿಂತಿದ್ದಾನೆ.
ನಂತರ, ನಡೆಯುತ್ತಿರುವ ಕ್ರಿಕೆಟ್ ಪಂದ್ಯಕ್ಕೆ ಕಾಮೆಂಟರಿ ನೀಡಲು ಸ್ಕೂಟರ್‌ನ ಸ್ಪೀಕರ್‌ಗಳನ್ನು ಧ್ವನಿವರ್ಧಕವಾಗಿ ಬಳಸಲಾಗಿದೆ.