ಖಾಸಗಿತನ ಸಂಬಂಧ ವಾಟ್ಸಾಪ್ ಹೊರತರುತ್ತಿರುವ ಹೊಸ ನೀತಿಗೆ ಸಮ್ಮತಿ ಸೂಚಿಸದೇ ಇದ್ದಲ್ಲಿ ಅಂತಹ ಗ್ರಾಹಕರಿಗೆ ಬರುವ ಮೇ 15ರಿಂದ ಈ ಅಪ್ಲಿಕೇಶನ್ ಮೂಲಕ ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗದು.
ಖಾಸಗಿತನ ಸಂಬಂಧ ತಾನು ಅಪ್ಡೇಟ್ ಮಾಡಿರುವ ಪಾಲಿಸಿಗೆ ಸಮ್ಮತಿ ಸೂಚಿಸಿದ ಕೂಡಲೇ ಗ್ರಾಹಕರಿಗೆ ವಾಟ್ಸಾಪ್ ಸೇವೆಗಳನ್ನು ಮತ್ತೆ ಬಳಸಲು ಅವಕಾಶ ಸಿಗುತ್ತದೆ. ಇಲ್ಲವಾದಲ್ಲಿ, ಅಂಥ ಖಾತೆಗಳನ್ನು ನಿಷ್ಕ್ರಿಯಗೊಳಿಸಿ, 120 ದಿನಗಳ ಒಳಗೆ ಡಿಲೀಟ್ ಮಾಡುವ ಸ್ವಾತಂತ್ರ‍್ಯ ವಾಟ್ಸಾಪ್‌ಗೆ ಇರಲಿದೆ. ಇಷ್ಟಾದ ಮೇಲೂ ಸಹ ಬಳಕೆದಾರರಿಗೆ ಕರೆ ಮಾಡಲು ಹಾಗೂ ನೋಟಿಫಿಕೇಶನ್‌ಗಳನ್ನು ಕೆಲ ವಾರಗಳ ಮಟ್ಟಿಗೆ ಬಳಸಲು ಅವಕಾಶ ಇರಲಿದೆ.
ಫೇಸ್ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರಂ ಫೆಬ್ರವರಿ 8ರ ವೇಳೆಗೆ ಖಾಸಗಿತನ ಸಂಬಂಧ ತನ್ನ ಹೊಸ ನೀತಿಯನ್ನು ಜಾರಿಗೆ ತರಲು ಮುಂದಾಗಿತ್ತು. ಆದರೆ ಇದಕ್ಕೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತಲೇ ತನ್ನ ಈ ನಡೆಯನ್ನು ಮುಂದಕ್ಕೆ ಹಾಕಿತ್ತು ವಾಟ್ಸಾಪ್.