ಮನೆಯೆಲ್ಲಾ ಘಮ ಘಮ ಎನ್ನಲು ಹಲವರು ರೂಮ್ ಫ್ರೆಶನರ್ಸ್ ಬಳಸುತ್ತಾರೆ. ಇದರಿಂದ ಆಹ್ಲಾದಕರ ವಾತಾವರಣವಿರುತ್ತದಲ್ಲದೇ ಮನಸ್ಸಿಗೆ ಮುದವೆನಿಸುತ್ತದೆ.
ಮತ್ತೇ ಕೆಲವರು ಸುವಾಸನಾಭರಿತ ಕ್ಯಾಂಡಲ್ ಗಳನ್ನು ಹಚ್ಚಿಡುತ್ತಾರೆ. ಅದರಲ್ಲೂ ‘ಕ್ಯಾಂಡಲ್ ಲೈಟ್ ಡಿನ್ನರ್’ ವೇಳೆ ಇದಕ್ಕೆ ಆದ್ಯತೆ ನೀಡುತ್ತಾರೆ.
ಆದರೆ ಸುವಾಸನಾಭರಿತ ಕ್ಯಾಂಡಲ್ಸ್ ಹಚ್ಚುವುದು ಅಪಾಯಕಾರಿ ಎನ್ನುತ್ತಾರೆ ತಜ್ಞರು. ಇದಕ್ಕೆ ಕೆಮಿಕಲ್ ಬಳಸುವ ಕಾರಣ ಇದನ್ನು ಹಚ್ಚುವುದರಿಂದ ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.
ಸುವಾಸನೆಯ ಸಲುವಾಗಿ ಕ್ಯಾಂಡಲ್ ಗಳಲ್ಲಿ ಲಿಮೊನೀನ್ ಬಳಸುತ್ತಿರುವುದು ಸಂಶೋಧನೆಯಲ್ಲಿ ಕಂಡು ಬಂದಿದ್ದು, ಇದು ಸುಡುತ್ತಾ ಬಂದ ವೇಳೆ ಫಾರ್ಮಾಲ್ಡಿಹೈಡ್ ಆಗಿ ಬದಲಾಗುತ್ತದೆ. ಇದರ ಹೊಗೆಯನ್ನು ಸೇವಿಸಿದ ಮನುಷ್ಯರು ಉಸಿರಾಟದ ತೊಂದರೆ, ಗಂಟಲು ಸಮಸ್ಯೆ, ಕಣ್ಣು ಉರಿ, ಕೆಮ್ಮು ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನಲಾಗಿದೆ.