ಮಾವಿನಹಣ್ಣು, ಕಾಯಿ, ಎಷ್ಟು ಒಳ್ಳೆಯದೋ ಅಷ್ಟೇ ಈ ಮಾವಿನ ಎಲೆ ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಮಾವಿನ ಎಲೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಮಾವಿನೆಲೆಯನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ.
*ಮಾವಿನೆಲೆಯಲ್ಲಿ ಆ್ಯಂಟಿಆಂಕ್ಸಿಡೆಂಟ್ ಹೇರಳವಾಗಿರುತ್ತದೆ. ಹಾಗೇ ಇದರಲ್ಲಿ ಸಿ ವಿಟಮಿನ್ ಕೂಡ ಇರುತ್ತದೆ. ಮಾವಿನೆಲೆಯ ಟೀ ಮಾಡಿಕೊಂಡು ಕುಡಿಯುವುದರಿಂದ ದೇಹಕ್ಕೆ ಬೇಕಾದ ವಿಟಮಿನ್ ಸಿ ಅಂಶ ಸಿಗುತ್ತದೆ. ವಿಟಮಿನ್ ಸಿ ದೇಹದಲ್ಲಿರುವ ಟಾಕ್ಸಿನ್ ಅನ್ನು ಹೊರಹಾಕಲು ಸಹಾಯಮಾಡುತ್ತದೆ.
* ಮಾವಿನೆಲೆಯು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
* ಕೆಲಸದ ಒತ್ತಡ, ಯಾವುದೋ ತಲೆಬಿಸಿಯಿಂದ ಕಿರಿಕಿರಿ ಅನುಭವಿಸುತ್ತಿದ್ದರೆ 2 ಹಿಡಿ ಮಾವಿನೆಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ. ಈ ನೀರಿನಿಂದ ಸ್ನಾನ ಮಾಡಿ. ಇದು ದೇಹವನ್ನು ಉಲ್ಲಾಸಗೊಳಿಸುತ್ತದೆ.
*10 ಮಾವಿನೆಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಕ್ಲೀನ್ ಮಾಡಿ. ಇದನ್ನು 1 ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿರಿ. ಇಡೀ ರಾತ್ರಿ ಇದನ್ನು ಹಾಗೇಯೇ ಬಿಡಿ. ಬೆಳಿಗ್ಗೆ ಎಲೆಗಳನ್ನು ತೆಗೆದು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
* ಬಿಕ್ಕಳಿಗೆ ಹಾಗೂ ಗಂಟಲಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಮಾವಿನೆಲೆ ಒಂದು ಅದ್ಭುತ ಮನೆಮದ್ದು. ಸ್ವಲ್ಪ ಮಾವಿನೆಲೆಯನ್ನು ಸುಟ್ಟು ಅದರ ಹೊಗೆಯನ್ನು ಮೂಗಿಗೆ ಎಳೆದುಕೊಳ್ಳಿ. ಇದರಿಂದ ಬಿಕ್ಕಳಿಗೆ ಕಡಿಮೆಯಾಗುತ್ತದೆ ಹಾಗೂ ಗಂಟಲಿನ ಸಮಸ್ಯೆ ನಿವಾರಣೆಯಾಗುತ್ತದೆ.