ಸಾಮಾನ್ಯವಾಗಿ ಫಾಸ್ಟ್ ಫುಡ್ ಜೊತೆ ಟೊಮೊಟೊ ಸಾಸ್ ಕೊಡುತ್ತಾರೆ. ಬರ್ಗರ್, ನೂಡಲ್ಸ್, ಫ್ರೆಂಚ್ ಫ್ರೈಸ್ ಅಥವಾ ಪಿಜ್ಜಾ ಇವುಗಳಿಗೆ ಟೊಮೊಟೊ ಸಾಸ್ ಇಲ್ಲದೆ ಹೋದ್ರೆ ರುಚಿ ಇರೋದಿಲ್ಲ. ಟೊಮೆಟೊ ಸಾಸ್ ಇಷ್ಟಪಡುತ್ತಿದ್ದರೆ, ಮನೆಯಲ್ಲಿ ಬಾಟಲಿಯಿದ್ರೆ ಬಾಟಲ್ ಮೇಲೆ 57 ಎಂದು ಸಂಖ್ಯೆ ಬರೆದಿರುತ್ತದೆ. ಅದು ಏಕೆ ಗೊತ್ತಾ?
ಹೈಂಜ್ ಬ್ರಾಂಡ್ ಸಾಸ್ ಬಾಟಲಿಯ ಕುತ್ತಿಗೆ ಬಳಿ 57 ಎಂದು ಬರೆದಿರುವುದನ್ನು ನೀವು ನೋಡಬೇಕು. ಅದಕ್ಕೆ ಮುಖ್ಯವಾದ ಕಾರಣವಿದೆ. ಇದು ಬರಿ ಸಂಖ್ಯೆಯಲ್ಲ. ಹೈಂಜ್ ಟೊಮೇಟೊ ಸಾಸ್‌ನ ಗಾಜಿನ ಬಾಟಲಿಯ ಕುತ್ತಿಗೆಯನ್ನು ಎಚ್ಚರಿಕೆಯಿಂದ ಗಮನಿಸಿ. ಕೆಲವರು ಇದನ್ನು ಹೈಂಜ್ ಉತ್ಪನ್ನಗಳ ಸಂಖ್ಯೆ ಎಂದು ತಿಳಿದುಕೊಂಡಿರುತ್ತಾರೆ.
ಬಾಟಲಿಯಲ್ಲಿರುವ ಸಾಸ್ ಹೊರ ತೆಗೆಯುವುದು ಸ್ವಲ್ಪ ಕಷ್ಟ. ಕೆಲವೊಮ್ಮೆ ಹೆಚ್ಚಿನ ಸಾಸ್ ಹೊರ ಬಂದ್ರೆ ಮತ್ತೆ ಕೆಲವೊಮ್ಮೆ ಕಡಿಮೆ ಬರುತ್ತದೆ. ಸಾಸ್ ಸುಲಭವಾಗಿ ಹೊರಬರಲಿ ಎನ್ನುವ ಕಾರಣಕ್ಕೆ ಕಂಪನಿ ಈ ಪ್ಲಾನ್ ಮಾಡಿದೆ. ಕಂಪನಿ ಈ ಸಂಖ್ಯೆಯನ್ನು ನೀಡಿದೆ. ಸಾಸ್ ಮೇಲೆ ನೀಡಿರುವ 57ರ ಸಂಖ್ಯೆ ಮೇಲೆ ಪ್ರೆಸ್ ಮಾಡಿದ್ರೆ ಸಾಸ್ ಸುಲಭವಾಗಿ ಹೊರಬರುತ್ತದೆ.