ನಟ ಸಲ್ಮಾನ್ ಖಾನ್ ಸಿನಿ ಪ್ರಿಯರ ಆಲ್ ಟೈಮ್ ಫೇವರಿಟ್. ಕೇವಲ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಸಲ್ಲುಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಈಗ ಸೂಪರ್ ಸ್ಟಾರ್. ಸುಮಾರು 30 ವರ್ಷಗಳಿಂದ ಶಾರುಖ್, ಸಲ್ಮಾನ್ ಹಾಗೂ ಅಕ್ಷಯ್ ಕುಮಾರ್ ಬಾಲಿವುಡ್ ಅನ್ನು ಆಳ್ತಿದ್ದಾರೆ.
ಹಾಗಂತ ಸಲ್ಮಾನ್ ಖಾನ್ ನಟಿಸಿದ ಚಿತ್ರಗಳೆಲ್ಲ ಸೂಪರ್ ಹಿಟ್ ಅಂದ್ಕೋಬೇಡಿ. ಸಲ್ಲು ಖಾತೆಯಲ್ಲಿ ಫ್ಲಾಪ್ ಸಿನೆಮಾಗಳು ಕೂಡ ಇವೆ. ಕಳೆದ 25 ವರ್ಷಗಳಲ್ಲಿ ಭಾರತದಲ್ಲಿ ಕನಿಷ್ಠ 1 ಕೋಟಿ ರೂಪಾಯಿಯನ್ನು ಗಳಿಸದ ಸಲ್ಮಾನ್‌ರ ಏಕೈಕ ಚಿತ್ರವೊಂದಿದೆ. ಇದು ಭಾಯಿಜಾನ್ ನಟಿಸಿರೋ ಬಿಗ್ಗೆಸ್ಟ್ ಫ್ಲಾಪ್ ಅಂತಾನೇ ವಿಶ್ಲೇಷಿಸಲಾಗ್ತಿದೆ.
ಕೇವಲ 90 ಲಕ್ಷ ಗಳಿಸಿದೆ ಸಲ್ಲು ನಟನೆಯ ಈ ಫ್ಲಾಪ್ ಚಿತ್ರ
2007 ರಲ್ಲಿ ಅಮೆರಿಕನ್ ನಿರ್ದೇಶಕ ವಿಲ್ಲಾರ್ಡ್ ಕ್ಯಾರೊಲ್ ಭಾರತಕ್ಕೆ ವಿಸಿಟ್ ಮಾಡಿದ್ದರು. 150ಕ್ಕೂ ಹೆಚ್ಚು ಬಾಲಿವುಡ್ ಚಲನಚಿತ್ರಗಳನ್ನು ವೀಕ್ಷಿಸಿದ್ದ ಹಾಲಿವುಡ್ ನಿರ್ದೇಶಕರಿಗೆ ಇಲ್ಲೊಂದು ಸಿನೆಮಾ ಮಾಡುವ ಆಸೆಯಾಗಿದೆ. ʼಮಾರಿಗೋಲ್ಡ್ʼ ಹೆಸರಿನ ಚಿತ್ರವೊಂದನ್ನು ನಿರ್ಮಿಸಿದ್ರು. ಈ ಚಿತ್ರದಲ್ಲಿ ಅಲಿ ಲಾರ್ಟರ್ ಹಾಗೂ ಸಲ್ಮಾನ್ ಖಾನ್ ಮುಖ್ಯ ಭೂಮಿಕೆಯಲ್ಲಿದ್ದರು.
ಅಮೆರಿಕನ್ ನಟಿಯೊಬ್ಬರು ಭಾರತ ಪ್ರವಾಸದ ವೇಳೆ ಅಲ್ಲಿನ ರಾಜಕುಮಾರನನ್ನು ಭೇಟಿ ಮಾಡುವ ರೊಮ್ಯಾಂಟಿಕ್ ಸಿನೆಮಾ ಇದಾಗಿತ್ತು. ಆದರೆ ಈ ಸಿನೆಮಾ ಪ್ರೇಕ್ಷಕರಿಗೆ ಇಷ್ಟವಾಗಲೇ ಇಲ್ಲ. ಬಾಕ್ಸ್ ಆಫೀಸ್‌ನಲ್ಲಿ ಮಾರಿಗೋಲ್ಡ್ ಚಿತ್ರದ ಕಲೆಕ್ಷನ್ ಕೇವಲ 90 ಲಕ್ಷ ರೂಪಾಯಿ. ವಿಶ್ವಾದ್ಯಂತ ಕೇವಲ 2.29 ಕೋಟಿ ಗಳಿಸಿತು. ಇದು 90ರ ದಶಕದ ನಂತರ ಸಲ್ಮಾನ್‌ರ ಅತ್ಯಂತ ಕಡಿಮೆ ಗಳಿಕೆಯ ಚಿತ್ರವಾಗಿ ಉಳಿದಿದೆ.
ಹಾಲಿವುಡ್ ನಿರ್ದೇಶಕ ಕ್ಯಾರೊಲ್ ಬಯಸಿದಂತೆ ಮಾರಿಗೋಲ್ಡ್ ಅದ್ಭುತ ಯಶಸ್ಸು ಪಡೆಯಲಿಲ್ಲ. ನಿರ್ದೇಶಕ, ಬರಹಗಾರ ಅಥವಾ ನಿರ್ಮಾಪಕನಾಗಿ ಮಾರಿಗೋಲ್ಡ್, ಕ್ಯಾರೊಲ್ ಅವರ ಅಂತಿಮ ಚಿತ್ರವಾಗಿತ್ತು. ಮಾರಿಗೋಲ್ಡ್ ನಂತರ ಮತ್ಯಾವುದೇ ಹಿಂದಿ ಚಿತ್ರಕ್ಕೆ ಅವರು ಕೈಹಾಕಲೇ ಇಲ್ಲ.