ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆಯುವುದು ಬಹಳ ಮುಖ್ಯ. ವಾರ್ಷಿಕ ವಹಿವಾಟಿಗೆ ಇದ್ರಿಂದ ನೆರವಾಗಲಿದೆ. ಉಳಿತಾಯ ಖಾತೆಯಿಲ್ಲವೆಂದ್ರೆ ಹಣ ಇಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಉಳಿತಾಯ ಖಾತೆ ತೆರೆಯುವ ಮೊದಲು ಅದ್ರ ಬಗ್ಗೆ ತಿಳಿದಿರುವುದು ಬಹಳ ಮುಖ್ಯ.
ಉಳಿತಾಯ ಖಾತೆ ಠೇವಣಿ ಖಾತೆಯಾಗಿದೆ. ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಇದನ್ನು ತೆರೆಯಬಹುದು. ಖಾತೆದಾರ ತನ್ನ ಆದಾಯವನ್ನು ಇದರಲ್ಲಿ ಇಡಬಹುದು. ಸಂಬಳ ಅಥವಾ ಗಳಿಕೆ ಹಣ ನೇರವಾಗಿ ಖಾತೆಗೆ ಬರುವಂತೆ ಮಾಡಿಕೊಳ್ಳಬಹುದು. ಉಳಿತಾಯ ಖಾತೆದಾರರಿಗೆ ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಇದ್ರಿಂದ ವಿವಿಧ ರೀತಿಯ ವಹಿವಾಟುಗಳನ್ನು ಮಾಡಬಹುದು. ಖಾತೆದಾರರು ನಿಯಮಿತವಾಗಿ ಖಾತೆ ಸ್ಟೇಟ್ಮೆಂಟ್ ಪಡೆಯಬಹುದು.
ಖಾತೆ ನಿಯಮದ ಪ್ರಕಾರ, ಖಾತೆಯಲ್ಲಿ ಕನಿಷ್ಠ ಬಾಕಿ ಇಡಬೇಕಾಗುತ್ತದೆ. ಖಾತೆಯನ್ನು ಖಾಲಿ ಮಾಡಿದ್ರೆ ದಂಡ ವಿಧಿಸಲಾಗುತ್ತದೆ. ಬ್ಯಾಂಕ್ ನಿರ್ಧರಿಸಿದ ಕನಿಷ್ಠ ಮೊತ್ತ ಖಾತೆಯಲ್ಲಿರಬೇಕು. ಉಳಿತಾಯ ಖಾತೆಯಲ್ಲಿ ಠೇವಣಿ ಇರಿಸಿದ ಹಣಕ್ಕೆ ಬಡ್ಡಿ ಸಿಗುತ್ತದೆ. ಇದನ್ನು ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ಕೆಲವು ಸಂದರ್ಭಗಳಲ್ಲಿ ವಾರ್ಷಿಕ ಆಧಾರದ ಮೇಲೆ ನೀಡಲಾಗುತ್ತದೆ. ಉಳಿತಾಯ ಖಾತೆಯ ಬಡ್ಡಿದರಗಳು ಸಾಮಾನ್ಯವಾಗಿ ಸ್ಥಿರ ಠೇವಣಿಗಳಿಗಿಂತ ಕಡಿಮೆಯಿರುತ್ತದೆ.