
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಭಾರಿ ಏರಿಕೆ ಕಂಡಿದೆ. ಹೀಗಾಗಿ ಜನರು ಸೈಕಲ್‌ನಲ್ಲಿ ಸವಾರಿ ಮಾಡಲು ಇಷ್ಟಪಡುತ್ತಾರೆ. ಪ್ರತಿಯೊಂದು ಸಣ್ಣ ಕೆಲಸಕ್ಕಾಗಿ ಕಾರು, ಬೈಕ್ ಗೆ ಅವಲಂಬನೆಯಾಗೋದು ಬಿಟ್ಟು ಸೈಕಲ್ ನಲ್ಲಿ ಹೋದರೆ ಬಜೆಟ್ ಗೂ ಒಳ್ಳೆಯದು, ಆರೋಗ್ಯಕ್ಕೂ ಒಳ್ಳೆಯದು. ಇದೀಗ ಟಾಟಾ ಸೈಕಲ್ ಗೆ ವಿಭಿನ್ನ ರೂಪ ನೀಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ತನ್ನ ಹೊಸ ಬೈಸಿಕಲ್ ಅನ್ನು ಜೀಟಾ ಪ್ಲಸ್ ಎಂದು ಪರಿಚಯಿಸಿದೆ.
ಎಲೆಕ್ಟ್ರಿಕ್ ಕಾರು, ದ್ವಿಚಕ್ರ ವಾಹನಗಳು ಮಾರುಕಟ್ಟೆಗೆ ಈಗಾಗಲೇ ಎಂಟ್ರಿ ಕೊಟ್ಟಿದೆ. ಇದೀಗ ಸೈಕಲ್ ಗೂ ಎಲೆಕ್ಟ್ರಿಕ್ ಟಚ್ ನೀಡಲಾಗಿದೆ. ಈ ಟಾಟಾ ಎಲೆಕ್ಟ್ರಿಕ್ ಸೈಕಲ್ ಇತ್ತೀಚಿನ ದಿನಗಳಲ್ಲಿ ಯುವಜನರ ಹೃದಯವನ್ನು ಗೆಲ್ಲುತ್ತಿದೆ.
ಸ್ಟ್ರೈಡರ್ ಝೀಟಾ ಪ್ಲಸ್ 216 Wh ಸೈಕಲ್ 250 W ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಇದು ಒಂದೇ ಚಾರ್ಜ್‌ನಲ್ಲಿ 25 ಕಿ.ಮೀ. ವರೆಗೆ ಚಲಿಸುತ್ತದೆ. ಇದರೊಂದಿಗೆ ಪೆಡಲ್ ಗಳನ್ನೂ ಇದರಲ್ಲಿ ನೀಡಲಾಗಿದೆ. ಇದರಲ್ಲಿ ನೀವು 100 ಕೆಜಿಯಷ್ಟು ತೂಕವನ್ನು ಬಹಳ ಸುಲಭವಾಗಿ ಸಾಗಿಸಬಹುದು.
ಸ್ಟ್ರೈಡರ್ ಝೀಟಾ ಪ್ಲಸ್ ವೈಶಿಷ್ಟ್ಯಗಳು:
ಕಂಪನಿಯು ಸ್ಟ್ರೈಡರ್ ಜೀಟಾ ಪ್ಲಸ್ ಸೈಕಲ್‌ನಲ್ಲಿ ಸಾಕಷ್ಟು ವೈಶಿಷ್ಟ್ಯಗಳನ್ನು ನೀಡಿದೆ. ಅದು ಕೆಟ್ಟ ರಸ್ತೆಗಳಲ್ಲಿಯೂ ಸಹ ಉತ್ತಮವಾಗಿ ಚಲಿಸುತ್ತದೆ. ಇದು ದೀರ್ಘ ಪ್ರಯಾಣಕ್ಕೆ ಆರಾಮದಾಯಕ ಆಸನವನ್ನು ಹೊಂದಿದೆ. ಅಲ್ಲದೆ, ಇದಕ್ಕೆ ಕಂಪನಿಯು ಎರಡು ವರ್ಷಗಳ ವಾರಂಟಿಯನ್ನು ನೀಡುತ್ತಿದೆ.
ಈ ಎಲೆಕ್ಟ್ರಿಕ್ ಸೈಕಲ್ ಓಡಿಸಲು ಪ್ರತಿ ಕಿ.ಮೀಗೆ 10 ಪೈಸೆ ವೆಚ್ಚವಾಗುತ್ತದೆ. ಇದರ ಆರಂಭಿಕ ಬೆಲೆ ಸುಮಾರು 26,995 ರೂ. ಇದು ಸೀಮಿತ ಅವಧಿಗೆ ಮಾತ್ರ. ಶೀಘ್ರದಲ್ಲೇ 6,000 ರೂ.ಗಳಷ್ಟು ಇದರ ಬೆಲೆ ಹೆಚ್ಚಾಗಬಹುದು.
ಬೈಸಿಕಲ್‌ನ ವೈಶಿಷ್ಟ್ಯಗಳನ್ನು ಗಮನಿಸುವುದಾದರೆ, ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ನೀಡಿದೆ. ಚಕ್ರದ ಹ್ಯಾಂಡಲ್‌ನಲ್ಲಿ ಪ್ರದರ್ಶನವನ್ನು ಒದಗಿಸಲಾಗಿದೆ. ಇದರಲ್ಲಿ ಬ್ಯಾಟರಿ ವ್ಯಾಪ್ತಿ, ಸಮಯದ ಮಾಹಿತಿ ಲಭ್ಯವಿರುತ್ತದೆ.
5 ಅಡಿ 4 ಇಂಚು ಎತ್ತರವಿರುವವರು ಸುಲಭವಾಗಿ ಈ ಸೈಕಲ್ ಸವಾರಿ ಮಾಡಬಹುದು. ಸ್ಟ್ರೈಡರ್ ಜೀಟಾ ಪ್ಲಸ್ ಸ್ಟ್ರಾಂಗ್ ಬ್ಯಾಟರಿಯನ್ನು ಹೊಂದಿದ್ದು, ನಾಲ್ಕು ಗಂಟೆಗಳಲ್ಲಿ ಪೂರ್ಣ ಚಾರ್ಜ್ ನೀಡುತ್ತದೆ. ನಿಮಗೆ ಬೇಕೆಂದಿದ್ದಲ್ಲಿ ಅದನ್ನು ಸ್ಟ್ರೈಡರ್‌ನ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಬಹುದು.