ನೃತ್ಯದ ವಿಷಯ ಬಂದಾಗ ಮಕ್ಕಳು, ವೃದ್ಧರು ಎಂಬ ಭೇದಭಾವ ಇಲ್ಲ. ಅದರಲ್ಲಿಯೂ ಪಂಜಾಬಿ ಹಾಡನ್ನು ಹಾಕಿದಾಗಲಂತೂ ಎಂತವರ ಕಾಲು ಕೂಡ ಆಡದೇ ಇರದು. ಎಷ್ಟೇ ನೃತ್ಯ ಮಾಡಲು ಹಿಂಜರಿಯುವವರೂ ಪಂಜಾಬಿ ಹಾಡನ್ನು ಹಾಡಿದಾಗ ತಲೆ ಕುಣಿಸಿ, ಕಾಲು ಅಲ್ಲಾಡಿಸುವುದು ಇದೆ. ಇಂಥದ್ದೇ ನೃತ್ಯವೊಂದು ಇದೀಗ ವೈರಲ್ ಆಗಿದೆ.
ವಯಸ್ಸಾದ ಮಹಿಳೆಯೊಬ್ಬರು ಪಂಜಾಬಿ ಹಾಡಿಗೆ ಸುಂದರವಾದ ನೃತ್ಯ ಮಾಡುವ ವಿಡಿಯೋ ಇದಾಗಿದೆ. ಸೀರೆ ಧರಿಸಿದ ಮಹಿಳೆಯೊಬ್ಬರು ಕಾರ್ಯಕ್ರಮವೊಂದರಲ್ಲಿ ಯಾವ ಯುವತಿಯರಿಗೂ ಕಡಿಮೆ ಇಲ್ಲದಂತೆ ನೃತ್ಯ ಮಾಡಿದ್ದಾರೆ.ಇದನ್ನು ನೋಡಿ ನೆಟ್ಟಿಗರಿಂದ ಶ್ಲಾಘನೆಗಳ ಸುರಿಮಳೆಯೇ ಆಗಿದೆ.
ಮಹಿಳೆ ತುಂಬಾ ಉತ್ಸಾಹದಿಂದ ಧೋಲ್ ಜಾಗೀರೋ ದಾಗೆ ಹಾಡಿಗೆ ನರ್ತಿಸಿದ್ದಾರೆ. ಇವರ ಹೆಸರು ರೇಖಾ ಎಂದು. ಬಾಲಿವುಡ್ ತಾರೆ ರೇಖಾ ವಯಸ್ಸಾದರೂ ಮಿಂಚುತ್ತಿರುವಂತೆ ಈ ರೇಖಾ ಕೂಡ ನರ್ತನದಲ್ಲಿ ಎಲ್ಲರ ಮನ ಗೆದ್ದಿರುವುದಾಗಿ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.