ಪ್ರಸ್ತುತ ವಾಟ್ಸಾಪ್ ಗ್ರೂಪ್ ಗಳಿಂದ ಯಾವುದೇ ಸದಸ್ಯ ಹೊರ ಬಂದ ನೋಟಿಫಿಕೇಶನ್ ಹೋಗಿ ಗ್ರೂಪ್ ನಲ್ಲಿರುವ ಎಲ್ಲಾ ಸದಸ್ಯರಿಗೂ ತಿಳಿಯುತ್ತದೆ.
ಆದರೆ, ಸದಸ್ಯ ಹೊರ ಹೋದರೆ ಕೇವಲ ಅಡ್ಮಿನ್ ಗೆ ಮಾತ್ರ ತಿಳಿಯುವಂತಹ ಹೊಸ ವೈಶಿಷ್ಟ್ಯತೆಯನ್ನು ವಾಟ್ಸಾಪ್ ಪರಿಚಯಿಸಲಿದೆ. ಈ ಹೊಸ ವಿಧಾನ ಸದ್ಯದಲ್ಲಿಯೇ ಅನುಷ್ಠಾನಗೊಳ್ಳಲಿದೆ. ಅಂದರೆ, ಸದಸ್ಯನೊಬ್ಬ ಗ್ರೂಪಿನಿಂದ ಹೊರ ಬಂದ ತಕ್ಷಣ ಅದರ ನೋಟಿಫಿಕೇಶನ್ ಕೇವಲ ಅಡ್ಮಿನ್ ಗೆ ಮಾತ್ರ ಹೋಗುತ್ತದೆ.
ಈ ಹೊಸ ವೈಶಿಷ್ಟ್ಯತೆಯು ವಾಟ್ಸಾಪ್ ಪ್ಲಾಟ್ ಫಾರ್ಮ್ ನ ಎಲ್ಲಾ ಗ್ರೂಪ್ ಗಳು ಮತ್ತು ಕಮ್ಯುನಿಟಿಗಳಿಗೆ ಲಭ್ಯವಾಗಲಿದೆ. ಬಳಕೆದಾರರು ಈ ಸೌಲಭ್ಯ ಪಡೆಯಲು ಸೆಟ್ಟಿಂಗ್ಸ್ ನಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಬೇಕಿಲ್ಲ.
ಈ ವೈಶಿಷ್ಟ್ಯತೆಯ ಸ್ಕ್ರೀನ್ ಶಾಟ್ ಅನ್ನು WABetaInfo ಹಂಚಿಕೊಂಡಿದೆ. ಪರೀಕ್ಷಾರ್ಥವಾಗಿ ವಾಟ್ಸಾಪ್ ಡೆಸ್ಕ್ ಟಾಪ್ ಆ್ಯಪ್ ನಲ್ಲಿ ಈ ಸೌಲಭ್ಯವನ್ನು ಪರೀಕ್ಷಿಸಲಾಗಿದ್ದು, ಯಶಸ್ವಿಯಾಗಿದೆ. ಸದ್ಯದಲ್ಲೇ ಈ ವ್ಯವಸ್ಥೆಯನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಗಳೆರಡಲ್ಲೂ ಅನುಷ್ಠಾನಕ್ಕೆ ತರಲಾಗುತ್ತಿದೆ.
ತೂಕ ಇಳಿಸಿಕೊಳ್ಳುವ ವೇಳೆ ಅಪ್ಪಿತಪ್ಪಿಯೂ ಮಾಡೀರಿ ಈ ತಪ್ಪು…….!
ಇತ್ತೀಚಿನ ದಿನಗಳಲ್ಲಿ ಅನಗತ್ಯವಾಗಿ ವಾಟ್ಸಾಪ್ ಗ್ರೂಪ್ ಗಳನ್ನು ರಚಿಸುವುದು ಮತ್ತು ವ್ಯಕ್ತಿಗಳ ಸಹಮತಿ ಇಲ್ಲದೇ ಅವರನ್ನು ಆ ಗ್ರೂಪಿಗೆ ಸೇರಿಸಿಕೊಂಡು ಕಿರಿಕಿರಿ ಉಂಟು ಮಾಡುವ ಪ್ರವೃತ್ತಿಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಇಷ್ಟವಿಲ್ಲದ ಸದಸ್ಯರು ಯಾವುದೇ ಮುನ್ಸೂಚನೆ ನೀಡದೇ ಅಥವಾ ಅಡ್ಮಿನ್ ಗಳ ಜೊತೆಗೆ ಅನಗತ್ಯವಾದ ವಾದ –ವಿವಾದಗಳನ್ನು ಮಾಡದೇ ಗ್ರೂಪಿನಿಂದ ಹೊರ ಬರಬಹುದಾಗಿದೆ. ವಾಟ್ಸಾಪ್ ಬಳಕೆದಾರರ ಖಾಸಗಿತನಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಈ ಹೊಸ ಸೇವೆಯನ್ನು ಅನುಷ್ಠಾನಗೊಳಿಸುತ್ತಿರುವುದಾಗಿ ವಾಟ್ಸಾಪ್ ತಿಳಿಸಿದೆ.