ಕೆಲಸದ ಒತ್ತಡ ಅಥವಾ ಆರೋಗ್ಯದ ಬದಲಾವಣೆಯಿಂದ ಕಾಣಿಸಿಕೊಳ್ಳುವ ತಲೆನೋವು ಕೆಲವೊಮ್ಮೆ ವಿಪರೀತ ಕಿರಿಕಿರಿ ತಂದೊಡ್ಡುತ್ತದೆ. ಇದಕ್ಕೆ ಕಾರಣ ಹಾಗೂ ಪರಿಹಾರ ಏನು ಗೊತ್ತೇ….?
ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತಲೆನೋವು ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದುದರ ಲಕ್ಷಣ. ಹೆಚ್ಚು ನೀರು ಕುಡಿಯುವ ಮೂಲಕ ಮತ್ತು ಕೆಲಸದ ಮಧ್ಯೆ ಮಧ್ಯೆ ವಿರಾಮ ತೆಗೆದುಕೊಳ್ಳುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ತಲೆಯ ಒಂದು ಬದಿ ಮಾತ್ರ ವಿಪರೀತ ನೋಯುತ್ತಿದ್ದು ಬಹುಕಾಲದವರೆಗೆ ಇದು ನಿಮ್ಮೊಂದಿಗಿದ್ದರೆ, ಮೈಗ್ರೇನ್ ನ ಲಕ್ಷಣವಾಗಿರಬಹುದು. ಆಲ್ಕೋಹಾಲ್ ನಿಂದ ದೂರವಿರುವುದು, ಸಮಯಕ್ಕೆ ಸರಿಯಾಗಿ ಅನ್ನಾಹಾರ ಸೇವಿಸುವುದು ಮತ್ತು ವೈದ್ಯರನ್ನು ಸಂಪರ್ಕಿಸುವುದೇ ಇದಕ್ಕಿರುವ ಪರಿಹಾರ.
ಕೆಫಿನ್ ಗಳನ್ನು ಕಡಿಮೆ ಸೇವನೆ ಮಾಡುವ ಮೂಲಕ, ಜಂಕ್ ಫುಡ್ ಗಳಿಂದ ದೂರ ಉಳಿದು ಆರೋಗ್ಯಕರ ಆಹಾರಗಳನ್ನು ಹೆಚ್ಚು ಸೇವಿಸುವ ಮೂಲಕ ಮತ್ತು ಉತ್ತಮ ನಿದ್ದೆ ಪಡೆಯುವ ಮೂಲಕ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.