ಸದಾ ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳುವ ನಿಮ್ಮ ಆರೋಗ್ಯ ಕಾಪಾಡುವ ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ ಕೇಳಿ. ಅಸಮರ್ಪಕ ಆಹಾರ ಪದ್ಧತಿ ನಿಮಗೆ ಹಲವು ಸಮಸ್ಯೆಗಳನ್ನು ತಂದೊಡ್ಡಿರಬಹುದು. ಹಾಗಾಗಿ ಜಂಕ್ ಫುಡ್ ಸೇವನೆಗೆ ದಿನ ನಿಗದಿಗೊಳಿಸಿ. ವಾರಕ್ಕೆ ಒಮ್ಮೆ ಮಾತ್ರ ಈ ಆಹಾರಗಳನ್ನು ಸೇವಿಸಿ.
ಹೆಚ್ಚು ಕಂಪ್ಯೂಟರ್ ಮುಂದೆ ಅಥವಾ ಮೊಬೈಲ್ ಹಿಡಿದು ಕೆಲಸ ಮಾಡುವುದರಿಂದ ಕಣ್ಣು ದುರ್ಬಲಗೊಳ್ಳುತ್ತಿದ್ರೆ. ಇದನ್ನು ಸರಿಪಡಿಸುವುದು ಬಲು ಸುಲಭ. ನಿಮ್ಮ ಕಣ್ಣಿನ ಭಾಗಕ್ಕೆ ಸಾಕಷ್ಟು ಪ್ರಮಾಣದ ಬೆಳಕು ಬೀಳುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ದೇಹದ ಆಯಾಸ ಸುಸ್ತುಗಳನ್ನು ಕಡಿಮೆ ಮಾಡಿಕೊಳ್ಳಲು ಅಂಗಾಲುಗಳಿಗೆ ಮಸಾಜ್ ಮಾಡಿ. ಐದರಿಂದ ಹದಿನೈದು ನಿಮಿಷ ಹೊತ್ತು ಎಣ್ಣೆ ಹಚ್ಚಿ ಮೃದುವಾಗಿ ತಿಕ್ಕಿ. ಇದರಿಂದ ದೇಹದ ಉಷ್ಣತೆಯೂ ಕಡಿಮೆಯಾಗುತ್ತದೆ.
ನೀರು ಕುಡಿಯುವಾಗ ಅಂದರೆ ಬಿಸಿನೀರು ಕುಡಿಯಲೆಂದು ಕಾಯಿಸುವಾಗ ಅದಕ್ಕೆ ಒಂದೆರಡು ಚಿಗುರು ತುಳಸಿ ಎಲೆ ಹಾಕಿರಿ. ಇದರೊಂದಿಗೆ ನೀರು ಕುದಿಯಲಿ. ತಣ್ಣಗಾದ ಬಳಿಕ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿ ಶೀತ, ಕೆಮ್ಮುವಿನಂಥ ಸಮಸ್ಯೆಗಳು ದೂರವಾಗುತ್ತವೆ.