ಜಾಹೀರಾತುಗಳಲ್ಲಿ ಫೋಟೋಶಾಪ್ ಮತ್ತು ವಿಶೇಷ ಎಫೆಕ್ಟ್ಗಳ ಬಳಕೆ ಬಹಳ ಸಾಮಾನ್ಯವಾದ ವಿಚಾರ. ಆದರೆ ಇಂಥ ಸಮಯದಲ್ಲಿ ಎಚ್ಚರಿಕೆಯಿಂದ ಇಲ್ಲದೇ ಇದ್ದರೆ, ತಪ್ಪುಗಳು ಹುಡುಕಿ ಹುಡುಕಿ ತೆಗೆಯುವ ಹದ್ದಿನ ಕಣ್ಣಿನ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿ ಹುರಿದುಬಿಡುತ್ತಾರೆ.
ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ರನ್ನು ಒಳಗೊಂಡ ಜಾಹೀರಾತಿನ ಪ್ರಿಂಟ್ ಒಂದನ್ನು ತೆಗೆಯುವ ವಿಚಾರದಲ್ಲಿ ಇತ್ತೀಚೆಗೆ ಹೀಗೇ ಆಗಿದೆ.
‘ದೀಪಾವಳಿ’ಯಲ್ಲಿ ಆಕಾಶ ದೀಪ ಹಚ್ಚುವ ಸಂಪ್ರದಾಯ ಏಕಿದೆ….?
ಆಭರಣ ಕಂಪನಿಯೊಂದರ ಇತ್ತೀಚಿನ ಜಾಹೀರಾತಿಗಾಗಿ ಪ್ರಚಾರ ರಾಯಭಾರಿಯು ನಟಿ ಪೂಜಾ ಸಾವಂತ್ ಜೊತೆಗೆ ಮದುವೆಯ ಕಲೆಕ್ಷನ್ ಅನ್ನು ಪ್ರಮೋಟ್ ಮಾಡಲು ಪೋಸ್ ನೀಡುತ್ತಿರುವ ಚಿತ್ರವೊಂದು ನೆಟ್ಟಿಗರ ವಿಶೇಷ ಗಮನ ಸೆಳೆದಿದೆ. ಆದರೆ ಈ ಚಿತ್ರದಲ್ಲಿ ಗಮನ ಸೆಳೆದಿದ್ದು ನಟನ ಪೋಷಾಕಲ್ಲ, ಬದಲಾಗಿ ಎಡಿಟಿಂಗ್ ದೋಷ.
ಜಾಹೀರಾತಿನಲ್ಲಿ ತಂದೆ-ಮಗಳ ಜೋಡಿಯಾಗಿ ಬಚ್ಚನ್ ಮತ್ತು ಸಾವಂತ್ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರದಲ್ಲಿ ಬಚ್ಚನ್ರ ಕೈಗಳು ತಪ್ಪಾದ ಕಡೆಯಲ್ಲಿರುವುದು ನೆಟ್ಟಿಗರ ಕಣ್ಣಿಗೆ ಬಿದ್ದಿದೆ.
ಶೌಚಾಲಯಕ್ಕೆ ಹೋದಾಗ ಮೊಬೈಲ್ ಬಳಸ್ತೀರಾ…? ಹಾಗಿದ್ರೆ ಹುಷಾರ್….!
“ಡ್ಯಾಡಿಯ ಉದ್ದನೆಯ ಕೈಗಳು ಎಷ್ಟು ದೂರ ಹೋಗಿವೆ ಎಂದು ಯಾರಾದರೂ ನೋಡಿದಿರಾ,” ಎಂದು ಟ್ವಿಟಿಗರೊಬ್ಬರು ಬರೆದಿದ್ದಾರೆ. ಆ ಮಾಡೆಲ್ ಸಿನೆಮಾ ತಾರೆಯಲ್ಲದ ಕಾರಣ ಬಿಗ್ಬಿಗೆ ಆಕೆಯೊಂದಿಗೆ ಪೋಸ್ ಕೊಡುವುದು ಇಷ್ಟವಿರಲಿಲ್ಲವೇನೋ. ನಾನು ಈ ಫೋಟೋಶಾಪ್ಗೆ 1/10 ಅಂಕ ನೀಡುತ್ತೇನೆ. ಮಹಿಳಾ ಮಾಡೆಲ್ ಚೆನ್ನಾಗಿ ಪೋಸ್ ಕೊಟ್ಟಿರುವ ಕಾರಣಕ್ಕೆ 1 ಅಂಕ ಎಂದು @yadsul ಹೆಸರಿನ ನೆಟ್ಟಿಗ ಬರೆದಿದ್ದಾರೆ.
ಇದೇ ಚಿತ್ರವು ನೆಟ್ಟಿಗರಿಂದ ಥರಾವರಿ ಪ್ರತಿಕ್ರಿಯೆಗಳಿಗೆ ಭಾಜನವಾಗಿದೆ.
https://twitter.com/orunyayamvendam/status/1448936610540654596?ref_src=twsrc%5Etfw%7Ctwcamp%5Etweetembed%7Ctwterm%5E1448936610540654596%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Famitabh-bachchans-jewellery-ad-with-bad-photoshop-leaves-netizens-in-splits-7575821%2F