ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ ಹೈಜಂಪ್ ಟಿ-63 ವಿಭಾಗದಲ್ಲಿ ಯುಎಸ್ಎನ ಸ್ಯಾಮ್ ಗ್ರೀವ್ ಚಿನ್ನದ ಪದಕ ಗೆದ್ದಿದ್ದಾರೆ. ಅವರ ಗೆಲುವಿಗೆ ಮೊದಲೇ ಅಪರಿಚಿತರೊಬ್ಬರು ನೀಡಿದ ಪತ್ರವು ಆತನನ್ನು ಅದಾಗಲೇ ವಿಜೇತನೆಂದು ಭಾವಿಸಿತು ಎಂದು ಹೇಳಲಾಗಿದೆ.
ಹೌದು, ಸ್ಯಾಮ್ ಗ್ರೀವ್ ಟ್ರ್ಯಾಕ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೊದಲು, ಪಂದ್ಯ ಆಯೋಜಕರು ಅವರಿಗೊಂದು ಪತ್ರ ನೀಡಿದರು. ಪತ್ರ ಕಳುಹಿಸಿದವರು ಅದರಲ್ಲಿ, ಆತನ ಮಗನಿಗೆ ಗ್ರೀವ್ ಜೀವನವನ್ನು ಬದಲಿಸಿದ ಅದೇ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವರ ಕುಟುಂಬಕ್ಕೆ ದೊಡ್ಡ ಧೈರ್ಯ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದರು.
ಕೊರೊನಾ ಮೂರನೇ ಅಲೆ ಎಚ್ಚರಿಕೆ…..! ಹಬ್ಬದಲ್ಲಿ ಮೈಮರೆಯದಂತೆ ಸೂಚನೆ
ಈ ಪತ್ರವನ್ನು 13 ವರ್ಷದ ಬಾಲಕ ಹರುಕಿಯ ತಂದೆ ಮಸಾಕಿ ಕಾಂಡೋ ಬರೆದಿದ್ದಾರೆ. ಅವರು ತಮ್ಮ 10ನೇ ವಯಸ್ಸಿನಲ್ಲಿ ಬಲ ಮೊಣಕಾಲಿನ ಆಸ್ಟಿಯೊಸಾರ್ಕೊಮಾದಿಂದ ಬಳಲುತ್ತಿದ್ದರು ಹಾಗೂ 23 ವರ್ಷದ ಅಮೆರಿಕನ್ ಕ್ರೀಡಾಪಟುವಿನಂತೆಯೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. “ನನ್ನ ಮಗ ಇಂದು ಟಿವಿಯಲ್ಲಿ ನೋಡುತ್ತಿದ್ದಾನೆ. ನಾವೆಲ್ಲರೂ ನಿಮ್ಮನ್ನು ಬೆಂಬಲಿಸುತ್ತಿದ್ದೇವೆ” ಎಂದು ಪತ್ರ ಬರೆದಿದ್ದಾರೆ.