ಒಮ್ಮೆಯಾದರೂ ಗಾಜಿನ ಸೇತುವೆಯ ಮೇಲೆ ನಡೆಯಬೇಕು ಅನ್ನೋದು ಅನೇಕರ ಕನಸು. ಆದರೆ ಬಡ ಮತ್ತು ಮಧ್ಯಮವರ್ಗದವರ ಈ ಕನಸು ನನಸಾಗುತ್ತಿರಲಿಲ್ಲ. ಏಕೆಂದರೆ ಗಾಜಿನ ಸೇತುವೆಗಳು ಚೀನಾ, ಕೆನಡಾ ಮತ್ತು ಅಮೆರಿಕದಂತಹ ದೇಶಗಳಲ್ಲಿದ್ದವು. ಅಲ್ಲಿಗೆ ಹೋಗುವುದು ಎಲ್ಲರಿಗೂ ಸುಲಭವಲ್ಲ. ಆದ್ರೀಗ ಭಾರತದಲ್ಲೇ ಕಣ್ಮನ ಸೆಳೆಯುವಂತಹ ಗಾಜಿನ ಸೇತುವೆಗಳಿವೆ.
ಸ್ಕೈ ವಾಕ್ ಪೆಲ್ಲಿಂಗ್ (ಸಿಕ್ಕಿಂ)
ಸಿಕ್ಕಿಂ ಅಂದಾಕ್ಷಣ ಸುಂದರವಾದ ಪರ್ವತಗಳೇ ಕಣ್ಮುಂದೆ ಬರುತ್ತವೆ. ಆದ್ರೀಗ ಇಲ್ಲಿನ ಗಾಜಿನ ಸೇತುವೆ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಗ್ಯಾಲ್ಶಿಂಗ್ ಜಿಲ್ಲೆಯಲ್ಲಿ ನಿರ್ಮಿಸಲಾದ ಸ್ಕೈ ವಾಕ್ ಪೆಲ್ಲಿಂಗ್ ಸಮುದ್ರ ಮಟ್ಟದಿಂದ 7,200 ಅಡಿ ಎತ್ತರದಲ್ಲಿದೆ. ಇದು ಪ್ರವಾಸಿಗರಿಗೆ ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ. ಇಲ್ಲಿಂದ ತೀಸ್ತಾ ಮತ್ತು ರಂಗಿತ್ ನದಿಗಳ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳಬಹುದು.
ರಾಜ್‌ಗಿರ್ ಗಾಜಿನ ಸೇತುವೆ (ಬಿಹಾರ)
ಬಿಹಾರದ ನಳಂದ ಜಿಲ್ಲೆಯಲ್ಲೂ ಸ್ಕೈ ವಾಕ್ ಇದೆ. ಇಲ್ಲಿರುವ ಗಾಜಿನ ಸೇತುವೆಯು 85 ಅಡಿ ಉದ್ದವಿದೆ. ಕಿರಿದಾದ ಕಣಿವೆಯ ಮೇಲೆ 200 ಅಡಿ ಎತ್ತರದಲ್ಲಿ ಗಾಜಿನ ಸೇತುವೆಯನ್ನು ಗನಿರ್ಮಿಸಲಾಗಿದೆ. ಪ್ರವಾಸಿಗರು ಮುಂಗಡವಾಗಿ ಆನ್‌ಲೈನ್ ಬುಕಿಂಗ್ ಮಾಡಿಕೊಂಡು ಇಲ್ಲಿಗೆ ಬರಬಹುದು. ಅಥವಾ ಬೆಳಗ್ಗೆ ಬೇಗನೆ ತಲುಪುವ ಮೂಲಕ ಕೌಂಟರ್ ಟಿಕೆಟ್‌ಗಳನ್ನು ಸಹ ಪಡೆಯಬಹುದು.
ವಯನಾಡಿನ ಗಾಜಿನ ಸೇತುವೆ (ಕೇರಳ)
ಕೇರಳದ ವಯನಾಡ್ ಜಿಲ್ಲೆ ಸುಂದರವಾದ ಪರ್ವತಗಳು ಮತ್ತು ಚಹಾ ತೋಟಗಳಿಗೆ ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿನ ಗಾಜಿನ ಸೇತುವೆಯು ಭಾರತ ಮತ್ತು ವಿದೇಶಗಳಿಂದ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಗಾಜಿನ ಸೇತುವೆಯನ್ನು ವೀಕ್ಷಿಸಲು ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಚಿತ್ರಕೂಟ
ಉತ್ತರಪ್ರದೇಶದ ಮೊದಲ ಗಾಜಿನ ಸೇತುವೆಯನ್ನು ಚಿತ್ರಕೂಟದಲ್ಲಿ ನಿರ್ಮಾಣ ಮಾಡಲಾಗ್ತಿದೆ. ರಾಮನ ಬಿಲ್ಲು ಮತ್ತು ಬಾಣದ ಆಕಾರದಲ್ಲಿ ಇದು ನಿರ್ಮಾಣವಾಗುತ್ತಿದೆ. ಗಾಜಿನ ಸೇತುವೆಯ ಬಾಣದ ಉದ್ದ 25 ಮೀಟರ್ ಆಗಿದ್ದರೆ ಬಿಲ್ಲಿನ ಅಗಲ 35 ಮೀಟರ್. ಅಂದಾಜಿನ ಪ್ರಕಾರ ಈ ಸೇತುವೆಯು ಪ್ರತಿ ಚದರ ಮೀಟರ್‌ಗೆ 500 ಕೆಜಿ ಭಾರವನ್ನು ಹೊರಬಲ್ಲದು. ಇದು 2024 ರಲ್ಲಿಯೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಭಾರತದಲ್ಲಿ ಎಲ್ಲೆಲ್ಲಿ ಗಾಜಿನ ಸೇತುವೆಗಳನ್ನು ನಿರ್ಮಿಸಲಾಗಿದೆಯೋ ಅಲ್ಲೆಲ್ಲಾ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗ್ತಿದೆ.