ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಒಂಬತ್ತನೇ ಕಂತನ್ನು ಸೋಮವಾರ ಬಿಡುಗಡೆ ಮಾಡಿದ್ದಾರೆ. ದೇಶದ ಕೋಟ್ಯಾಂತರ ರೈತರ ಖಾತೆಗಳಿಗೆ ಈಗಾಗಲೇ ಹಣ ವರ್ಗಾವಣೆಯಾಗಿದೆ. ಆದರೆ ಇನ್ನೂ ಕಂತು ಹಣವನ್ನು ಪಡೆಯದ ಅನೇಕ ರೈತರಿದ್ದಾರೆ. ನಿಮ್ಮ ಖಾತೆಗೂ ಹಣ ಬಂದಿಲ್ಲವೆಂದ್ರೆ ಚಿಂತಿಸುವ ಅಗತ್ಯವಿಲ್ಲ.
ಸರ್ಕಾರ ನೀಡಿದ ಸಹಾಯವಾಣಿ ಸಂಖ್ಯೆಗೆ ದೂರು ನೀಡಬಹುದು. ಇಲ್ಲವೆ ಅಕೌಂಟೆಂಟ್ ಮತ್ತು ಕೃಷಿ ಅಧಿಕಾರಿಯನ್ನೂ ಸಂಪರ್ಕಿಸಬಹುದು. ಕೆಲವೊಮ್ಮೆ ಸರ್ಕಾರ, ಖಾತೆಗೆ ಹಣ ವರ್ಗಾಯಿಸುತ್ತದೆ. ಆದ್ರೆ ರೈತರ ಖಾತೆಗೆ ಹಣ ಬಂದಿರುವುದಿಲ್ಲ. ಇದಕ್ಕೆ ಆಧಾರ್, ಖಾತೆ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯಲ್ಲಿನ ತಪ್ಪು ಮುಖ್ಯ ಕಾರಣವಾಗುತ್ತದೆ.
ಪ್ರದೇಶದ ಅಕೌಂಟೆಂಟ್ ಮತ್ತು ಕೃಷಿ ಅಧಿಕಾರಿಯನ್ನು ಸಂಪರ್ಕಿಸಿ, ನಿಮ್ಮ ಸಮಸ್ಯೆ ಹೇಳಿಕೊಳ್ಳಿ. ಒಂದು ವೇಳೆ ಇದಕ್ಕೆ ಸ್ಪಂದನೆ ಸಿಕ್ಕಿಲ್ಲವೆಂದಾದ್ರೆ ಸಹಾಯವಾಣಿಗೆ ಕರೆ ಮಾಡಬಹುದು. ಕಿಸಾನ್ ಸಮ್ಮಾನ್ ನಿಧಿಯ ಕಂತು ಸಿಗದಿದ್ದರೆ, ಪಿಎಂ ಕಿಸಾನ್ ಸಮ್ಮಾನ್ ಅವರ ಸಹಾಯವಾಣಿ ಸಂಖ್ಯೆಗೆ ದೂರು ಸಲ್ಲಿಸಬಹುದು. ಇದಕ್ಕಾಗಿ ಸಹಾಯವಾಣಿ ಸಂಖ್ಯೆ 011 24300606 /011 23381092 ಗೆ ಕರೆ ಮಾಡಬಹುದು. ಸೋಮವಾರದಿಂದ ಶುಕ್ರವಾರದವರೆಗೆ pmkisan ict@gov.in ನಲ್ಲಿ ನಿಮ್ಮ ದೂರು ನೀಡಬಹುದು.