alex Certify ‘ಮಿಶನ್ ಇಂಪಾಸಿಬಲ್-7’ ಸಿನೆಮಾ ಜೊತೆ ಜೊತೆಗೆ ‘ಜವಾನ್’ ಟ್ರೇಲರ್ ರಿಲೀಸ್: ಥ್ರಿಲ್​ ಆದ ಶಾರುಖ್​ ಫ್ಯಾನ್ಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಿಶನ್ ಇಂಪಾಸಿಬಲ್-7’ ಸಿನೆಮಾ ಜೊತೆ ಜೊತೆಗೆ ‘ಜವಾನ್’ ಟ್ರೇಲರ್ ರಿಲೀಸ್: ಥ್ರಿಲ್​ ಆದ ಶಾರುಖ್​ ಫ್ಯಾನ್ಸ್​

ಬಾಲಿವುಡ್ ಬಾದ್​​ಶಾಹ್​ ಶಾರುಖ್​​ಖಾನ್​ ಸಿನೆಮಾ ಬರ್ತಿದೆ ಅಂದ್ರೆ ಸಾಕು ಅಭಿಮಾನಿಗಳಿಗೆ ಹಬ್ಬವೋ ಹಬ್ಬ..!! ಇತ್ತೀಚೆಗೆ ‘ಪಠಾಣ್’ ಸಿನೆಮಾ ಮೂಲಕ ಶಾರುಖ್ ಬಾಲಿವುಡ್​​​ಗೆ ಮರುಜೀವ ಕೊಟ್ಟಿದ್ದರು. ಈಗ ಮತ್ತೆ ಶಾರುಖ್ ಬಹು ನಿರೀಕ್ಷಿತ ‘ಜವಾನ್’ ಸಿನೆಮಾ ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ಇಂಟ್ರಸ್ಟಿಂಗ್ ವಿಚಾರ ಏನಂದ್ರೆ, ಬಾಲಿವುಡ್​ನ ಈ ‘ಜವಾನ್’ ಸಿನೆಮಾಗೆ ಹಾಲಿವುಡ್ ಸಿನೆಮಾ ಬೆನ್ನೆಲುಬಾಗಿ ನಿಂತಿದೆ.

ಅಸಲಿಗೆ ಹಾಲಿವುಡ್​​ನ ಮೋಸ್ಟ್ ಎಕ್ಸ್​​ಪೆಕ್ಟೆಡ್​ ‘ಮಿಷನ್ ಇಂಪಾಸಿಬಲ್-7’ ಸಿನೆಮಾ ರಿಲೀಸ್ ಆಗಲಿದೆ. ಇದೇ ಸಿನೆಮಾದ ಜೊತೆ ಜೊತೆಗೆನೇ ‘ಜವಾನ್’ ಟ್ರೆಲರ್ ರಿಲೀಸ್ ಆಗ್ತಿದೆ. ಸೆಪ್ಟೆಂಬರ್7ರಂದು ಜವಾನ್ ವಿಶ್ವದಾದ್ಯಂತ ರಿಲೀಸ್ ಆಗಲಿದ್ದು ಅದಕ್ಕೂ ಮುಂಚೆಯೇ ‘ಜವಾನ್’ ಸಿನೆಮಾ ಜ್ವರ ತಲೆಗೆ ಏರುವಂತೆ ಮಾಡುವುದಕ್ಕೆ ಸಿದ್ಧವಾಗಿದೆ ಈ ಟ್ರೇಲರ್.

ಈಗ ಹಾಲಿವುಡ್ ಸ್ಟಾರ್ ನಟ ಟಾಮ್ ಕ್ರೂಸ್ ನಟನೆಯ ‘ಮಿಷನ್ ಇಂಪಾಸಿಬಲ್-7’ ಇದೇ ಜುಲೈ 12ರಂದು ಬಿಡುಗಡೆ ಆಗಲಿದ್ದು ಅದೇ ದಿನ ‘ಜವಾನ್’ ಸಿನೆಮಾ ಟ್ರೇಲರ್ ರಿಲೀಸ್ ಆಗಲಿದೆ. ಈಗ ಒಂದೇ ಸಿನೆಮಾ ಡಬಲ್ ಧಮಾಕಾ ಸಿನಿಪ್ರೇಕ್ಷಕರಿಗೆ ಸಿಗೋದಂತೂ ಪಕ್ಕಾ

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...