ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ನೆರೆಹೊರೆಯವರ ವಿಚಿತ್ರ ನಿಯಮ ವೈರಲ್ ಆಗಿದೆ. ನೆರೆಹೊರೆಯವರು ವರವಾಗಬಹುದು ಅಥವಾ ಶಾಪವಾಗಬಹುದು. ಕೆಲವರು ನಿಮ್ಮ ಜೀವನವನ್ನು ಸುಲಭಗೊಳಿಸಿದರೆ, ಇನ್ನು ಕೆಲವರು ನರಕವನ್ನಾಗಿಸುತ್ತಾರೆ. ರೆಡ್ಡಿಟ್ ಬಳಕೆದಾರರೊಬ್ಬರ ನೆರೆಹೊರೆಯವರು ನೈತಿಕ ಪೋಲೀಸ್ ಆಗಿ ಬದಲಾಗಿ, ರಾತ್ರಿ 10 ಗಂಟೆಯ ನಂತರ ಲೈಂಗಿಕ ಕ್ರಿಯೆ ನಡೆಸುವುದನ್ನು ನಿಷೇಧಿಸಿದ್ದಾರೆ.
ರೆಡ್ಡಿಟ್ ಬಳಕೆದಾರರಾದ ‘thecuriosityofAlice’ ತನ್ನ ನೆರೆಹೊರೆಯವರು ತನಗೆ ಬಿಟ್ಟುಹೋದ ವಿಚಿತ್ರ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ. ಆಲಿಸ್‌ನ ನೆರೆಹೊರೆಯವರು ರಾತ್ರಿ 10 ಗಂಟೆಯ ನಂತರ ಲೈಂಗಿಕ ಕ್ರಿಯೆ ನಡೆಸುವುದನ್ನು “ನಿಷೇಧಿಸಿದ್ದಾರೆ”, ಅದನ್ನು “ಅಸಭ್ಯ ಮತ್ತು ಅನುಚಿತ” ಎಂದು ಲೇಬಲ್ ಮಾಡಿದ್ದಾರೆ.
ರೆಡ್ಡಿಟ್‌ನ ‘ಫೌಂಡ್ ಪೇಪರ್’ ವೇದಿಕೆಯಲ್ಲಿ ವಿಚಿತ್ರ ಟಿಪ್ಪಣಿಯನ್ನು ಪೋಸ್ಟ್ ಮಾಡಿದ ಬಳಕೆದಾರರು ಅದನ್ನು ‘ವಿಚಿತ್ರ’ ಎಂದು ಟ್ಯಾಗ್ ಮಾಡಿದ್ದಾರೆ. ಆಲಿಸ್‌ನ ನೆರೆಹೊರೆಯವರು ಆಕೆಯ ಮಲಗುವ ಕೋಣೆಯ ವಿಚಾರದ ಬಗ್ಗೆ ದೂರು ನೀಡುವಾಗ ಅದು ತಮಗೆ “ತುಂಬಾ ತೊಂದರೆ” ಯನ್ನುಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.
ವಿಚಿತ್ರ ಟಿಪ್ಪಣಿಗೆ ಪ್ರತಿಕ್ರಿಯಿಸಿದ ಕೆಲವು ನೆಟಿಜನ್‌ಗಳು “ನೆರೆಹೊರೆಯವರು ಲೈಂಗಿಕ ಕ್ರಿಯೆ ವಿಚಾರದಲ್ಲಿ ನೈತಿಕ ಪೋಲೀಸ್ ಗಿರಿ ಮಾಡಲು ಪ್ರಯತ್ನಿಸುವುದನ್ನು ನಾನು ಊಹಿಸಲು ಸಾಧ್ಯವಿಲ್ಲ” ಎಂದಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.