ಜೈಲುಗಳಿರುವುದು ಖೈದಿಗಳ ಬಂಧನಕ್ಕೆ. ಆದರೆ ಇಲ್ಲೊಂದು ಜೈಲಿನ ಕೋಣೆಗಳು ಬಾಡಿಗೆಗೆ ಸಿಗುತ್ತದೆ. ನಿಜ, ನಂಬಲೇ ಬೇಕಾದ ಸುದ್ದಿ ಇದು.
ಈ ದಿನಗಳಲ್ಲಿ ಜನರು ಎಲ್ಲವನ್ನೂ ಅನುಭವಿಸಬೇಕು ಎಂದು ಹೇಳುತ್ತಲೇ ಇರುತ್ತಾರೆ. ಜೈಲಿನ ಅನುಭವ ಪಡೆಯಲು ಆಸಕ್ತರಾದವರಿಗೆ ಇದೊಂದು ಅವಕಾಶ. ತಪ್ಪು ಮಾಡಿ ಶಿಕ್ಷೆ ಅನುಭವಿಸುವ ಬದಲು ಹಣಕೊಟ್ಟು ಜೈಲಿನಲ್ಲಿ ಇದ್ದು ಬರುವ ಅವಕಾಶ ಇದಾಗಿದೆ.
ಉತ್ತರಾಖಂಡ ಜೈಲು ಬಾಡಿಗೆಗೆ ಕೊಠಡಿ ನೀಡುವ ಮೂಲಕ ಜನರಿಗೆ ಜೈಲುವಾಸ ಅನುಭವಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಿದೆ.
ಹಲ್ದ್ವಾನಿಯ ಜೈಲು ಕೊಠಡಿಗಳನ್ನು ಬಾಡಿಗೆಗೆ ನೀಡುತ್ತಿದೆ. ರೂ. 500ಕ್ಕೆ ಬಾಡಿಗೆಗೆ ಜನರು ಕೊಠಡಿಯಲ್ಲಿ ಉಳಿಯಲು ಅವಕಾಶ ನೀಡಿದ ಭಾರತದ ಮೊದಲ ಜೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ ಬಂಧನ ಯೋಗ ಕಳೆದುಕೊಳ್ಳಲು ಈ ಅವಕಾಶದಿಂದ ಅನುಕೂಲವಾಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಒಬ್ಬ ವ್ಯಕ್ತಿಯು ಜೈಲಿನಲ್ಲಿ ಉಳಿಯಲು ಬಯಸಿದರೆ, ಅವರು ತಮ್ಮ ಹಳೆಯ ವಿಭಾಗದಲ್ಲಿ ಕೊಠಡಿಯನ್ನು ಪಡೆಯುತ್ತಾರೆ ಎಂದು ಹಲ್ದ್ವಾನಿ ಜೈಲಿನ ಸೂಪರಿಂಟೆಂಡೆಂಟ್ ಹೇಳಿದ್ದಾರೆ. ಆದರೆ, ಈ ಅನುಮತಿಯನ್ನು ಕೇಂದ್ರ ಕಚೇರಿಯಿಂದ ಪಡೆಯಬೇಕು.