
ಗೋಡಂಬಿಯಲ್ಲಿ ಪ್ರೊಟೀನ್, ವಿಟಮಿನ್, ಖನಿಜಗಳು ಮತ್ತು ಮಿನರಲ್ಸ್ ಗಳು ಹೆಚ್ಚಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇವು ಮಹತ್ವದ ಪಾತ್ರ ವಹಿಸುತ್ತವೆ.
ದೇಹ ತೂಕ ಇಳಿಕೆ ಮಾಡಿಕೊಳ್ಳಲು ಇದು ಸಹಕಾರಿ. ಇದು ಹೇಗೆಂದಿರಾ…? ಗೋಡಂಬಿಯಿಂದ ಹೃದಯದ ಆರೋಗ್ಯ ಕಾಪಾಡಬಹುದು. ಇದರಲ್ಲಿರುವ ಕೊಬ್ಬು ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ಇದರ ಸೇವನೆಯಿಂದ ಸ್ನಾಯುಗಳು ಬಲವಾಗುತ್ತವೆ ಮತ್ತು ಹೃದಯ ಆರೋಗ್ಯ ಉತ್ತಮವಾಗಿರುತ್ತದೆ.
ಇದರಲ್ಲಿರುವ ಫೈಬರ್, ಪ್ರೊಟೀನ್, ಕ್ಯಾಲ್ಸಿಯಂ, ಪೊಟ್ಯಾಶಿಯಂ ಅಂಶಗಳು ಮೂಳೆಗಳನ್ನು ದೃಢಗೊಳಿಸುತ್ತವೆ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಕಣ್ಣು ಹಾಗೂ ಕಣ್ಣಿನ ಪೊರೆಗಳನ್ನೂ ಇದು ರಕ್ಷಿಸುತ್ತದೆ.
ಹೆಚ್ಚು ಗೋಡಂಬಿ ತಿನ್ನುವುದರಿಂದ ರಕ್ತ ಸಂಬಂಧಿ ಸಮಸ್ಯೆಗಳು ನಿಮ್ಮ ಸಮೀಪಕ್ಕೆ ಸುಳಿಯುವುದಿಲ್ಲ. ಬೆಳಗಿನ ತಿಂಡಿಯ ಸಮಯದಲ್ಲಿ ಅಥವಾ ಅದಕ್ಕೂ ಮುನ್ನ ಗೋಡಂಬಿ ಸೇವಿಸುವುದರಿಂದ ದೇಹದ ತೂಕವನ್ನು ಇಳಿಸಬಹುದು ಎನ್ನುತ್ತಾರೆ ವಿಜ್ಞಾನಿಗಳು. ಗೋಡಂಬಿಗಳಲ್ಲಿರುವ ಕೊಬ್ಬು ಹಾಗೂ ಕ್ಯಾಲೊರಿಗಳು ದೇಹ ತೂಕವನ್ನು ಹೆಚ್ಚಿಸುವುದಿಲ್ಲ ಎಂಬುದೂ ದೃಢಪಟ್ಟಿದೆ.