ಸುಂದರವಾದ ದಟ್ಟ ಕೂದಲಿಗಾಗಿ ನಾವು ಇನ್ನಿಲ್ಲದ ಸರ್ಕಸ್ ಮಾಡುತ್ತೇವೆ. ಬಗೆಬಗೆಯ ಶಾಂಪೂ, ಹೇರ್ ಆಯಿಲ್‌ಗಳನ್ನು ಬಳಸ್ತೇವೆ. ಆದ್ರೆ ತಲೆಹೊಟ್ಟಿನ ಸಮಸ್ಯೆಗೆ ಮಾತ್ರ ಪರಿಹಾರ ಸಿಗುವುದಿಲ್ಲ. ತಲೆಹೊಟ್ಟಿನ ಸಮಸ್ಯೆ ಇದ್ದರೆ ಕೂದಲು ಉದುರುತ್ತದೆ. ಅಷ್ಟೇ ಅಲ್ಲ ತಲೆಹೊಟ್ಟು ಕೂದಲಿನಲ್ಲಿ ತುರಿಕೆಗೆ ಕಾರಣವಾಗುತ್ತದೆ. ಹೆಚ್ಚು ಎಣ್ಣೆಯುಕ್ತ ಉತ್ಪನ್ನಗಳನ್ನು ಬಳಸುವುದರಿಂದ ತಲೆಹೊಟ್ಟು ಉಂಟಾಗುತ್ತದೆ. ಶಾಂಪೂ ಬಳಕೆಯಿಂದ ಡ್ಯಾಂಡ್ರಫ್ ನಿವಾರಣೆ ಅಸಾಧ್ಯ. ಇದಕ್ಕಾಗಿ ನೀವು ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು. ಇದು ತಲೆಹೊಟ್ಟನ್ನು ಶಾಶ್ವತವಾಗಿ ಹೋಗಲಾಡಿಸುತ್ತದೆ.
ಕೋಳಿ ಮೊಟ್ಟೆ : ಮೊಟ್ಟೆ ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲದು. ಸ್ಟ್ರಾಂಗ್ ಹೇರ್‌ಗಾಗಿ ಮೊಟ್ಟೆಯನ್ನು ಬಳಸಿ. ಜೊತೆಗೆ ಇದರಿಂದ ತಲೆಹೊಟ್ಟು ಕೂಡ ನಿವಾರಣೆಯಾಗುತ್ತದೆ. ಮೊಟ್ಟೆಯ ಹಳದಿ ಭಾಗವನ್ನು ಬೇರ್ಪಡಿಸಿ ಅದನ್ನು ಸ್ಕಾಲ್ಪ್‌ಗೆ ಹಚ್ಚಿಕೊಳ್ಳಿ. ಒಂದು ಗಂಟೆ ಹಾಗೇ ಬಿಡಿ, ನಂತರ ಶಾಂಪೂವಿನಿಂದ ತಲೆ ತೊಳೆದುಕೊಳ್ಳಿ.
ಮೊಸರು: ಮೊಸರು ಯಾವಾಗಲೂ ಕೂದಲಿನಲ್ಲಿ ಹೊಳಪನ್ನು ತರುತ್ತದೆ. ಇದನ್ನು ನೈಸರ್ಗಿಕ ಕಂಡಿಷನರ್ ಎಂದು ಪರಿಗಣಿಸಬಹುದು. ತಲೆಹೊಟ್ಟಿನಿಂದ ತೊಂದರೆಗೊಳಗಾಗಿದ್ದರೂ ಸಹ ಮೊಸರನ್ನು ಬಳಸಬಹುದು. ಸ್ವಲ್ಪ ಮೊಸರನ್ನು ತೆಗೆದುಕೊಂಡು ಅದನ್ನು ತಲೆಗೆ ಚೆನ್ನಾಗಿ ಹಚ್ಚಿಕೊಳ್ಳಿ. ಒಂದು ಗಂಟೆಯ ನಂತರ ಅದನ್ನು ತೊಳೆಯಿರಿ. ವಾರದಲ್ಲಿ ಎರಡು ಮೂರು ಬಾರಿ ಹೀಗೆ ಮಾಡುವುದರಿಂದ ಡ್ಯಾಂಡ್ರಫ್ ನಿವಾರಣೆಯಾಗುತ್ತದೆ.
ತೆಂಗಿನ ಎಣ್ಣೆ: ತಲೆಹೊಟ್ಟು ನಿವಾರಣೆಗೆ ತೆಂಗಿನ ಎಣ್ಣೆ ಕೂಡ ಸಹಕಾರಿಯಾಗಿದೆ. ಸ್ಬಲ್ಪ ತೆಂಗಿನ ಎಣ್ಣೆಗೆ ನಿಂಬೆ ರಸವನ್ನು ಬೆರೆಸಿ. ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. 30 ನಿಮಿಷಗಳ ನಂತರ ತಲೆ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ತಲೆಹೊಟ್ಟು ಮಾಯವಾಗುತ್ತದೆ.