alex Certify ಇನ್ಮುಂದೆ ವಾಟ್ಸಾಪ್​ನಲ್ಲಿ ನಿಮ್ಮ ಮೆಸೇಜ್​ ಅನ್ನು ನೀವೇ ಕಳುಹಿಸಲು ಸಾಧ್ಯ: ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಮುಂದೆ ವಾಟ್ಸಾಪ್​ನಲ್ಲಿ ನಿಮ್ಮ ಮೆಸೇಜ್​ ಅನ್ನು ನೀವೇ ಕಳುಹಿಸಲು ಸಾಧ್ಯ: ಇಲ್ಲಿದೆ ಮಾಹಿತಿ

 

ವಾಟ್ಸಾಪ್ ದಿನದಿಂದ ದಿನಕ್ಕೆ ಅಪ್​ಡೇಟ್​ ಆಗುತ್ತಲೇ ಇದೆ. ಇದೀಗ ಹೊಸದೊಂದು ಫೀಚರ್​ ಒಂದನ್ನು ಇದು ಪರಿಚಯಿಸಿದೆ. ನಿಮ್ಮ ಸಂದೇಶವನ್ನು ನೀವೇ ಕಳುಹಿಸಿಕೊಳ್ಳುವ ಫೀಚರ್​ ಇದಾಗಿದೆ. ಇಲ್ಲಿಯವರೆಗೆ ಯಾವುದಾದರೂ ಕಾರಣಕ್ಕೆ ನಮ್ಮ ಸಂದೇಶವನ್ನು ನಾವೇ ಕಳುಹಿಸಿಕೊಳ್ಳಬೇಕು ಎನಿಸಿದರೆ ಅದಕ್ಕೆ ಯಾವ ಅವಕಾಶಗಳೂ ಇರಲಿಲ್ಲ. ಒಂದು ಗ್ರೂಪ್​ ಕ್ರಿಯೇಟ್​ ಮಾಡಿ ಅದರಲ್ಲಿ ಯಾರನ್ನಾದರೂ ಇನ್​ವೈಟ್​ ಮಾಡಿ ನಂತರ ಅವರನ್ನು ಅದರಿಂದ ತೆಗೆದುಹಾಕಿ ನೀವೊಬ್ಬರೇ ಇರುವ ಗುಂಪನ್ನು ರಚಿಸಿಕೊಳ್ಳಲು ಅವಕಾಶವಿತ್ತು. ಆದರೆ ಇದೀಗ ಇದರ ತೊಂದರೆ ಇಲ್ಲದೇ ಸುಲಭದಲ್ಲಿ ಮಾಡಬಹುದು ಎಂದು ವಾಟ್ಸಾಪ್ ಹೇಳಿದೆ.

ನಿಮ್ಮ ಸಂದೇಶಗಳನ್ನು ನೀವೇ ಕಳುಹಿಸುವ ಹೊಸ ಸಾಮರ್ಥ್ಯವು ಈಗ iOS ನಲ್ಲಿ ಅಪ್ಲಿಕೇಶನ್‌ನ ಆವೃತ್ತಿ 22.23.74 ನೊಂದಿಗೆ ಲಭ್ಯವಿದೆ. ಎಂಡ್ರಾಯ್ಡ್​ನ 2.22.23.77 ನಲ್ಲಿ ಈ ಹೊಸ ವೈಶಿಷ್ಟ್ಯವು ಕೆಲವರಿಗೆ ಲಭ್ಯವಿರಲಿದೆ.

ಕೆಲವೊಮ್ಮೆ ಸಾಮಾಜಿಕ ಜಾಲತಾಣಕ್ಕೋ ಅಥವಾ ಇನ್ನಾರಿಗಾದರೋ ಒಂದು ಸಂದೇಶ ಕಳುಹಿಸಿರುವುದು ಇರುತ್ತದೆ. ಅಂಥ ಸಂದರ್ಭದಲ್ಲಿ ಇಲ್ಲಿಯವರೆಗೆ ನೋಟ್​ಪ್ಯಾಡ್​ನಲ್ಲೋ ಅಥವಾ ಇನ್ನೆಲ್ಲೋ ಅದನ್ನು ಸೇವ್​ ಮಾಡಿಕೊಂಡು ಇಡಲಾಗುತ್ತಿತ್ತು. ಕೆಲವೊಮ್ಮೆ ಯಾವುದೇ ಮಹತ್ವದ ಮಾಹಿತಿಯನ್ನು ಸೇವ್​ ಮಾಡಿಕೊಳ್ಳುವುದಿದ್ದರೂ ಬೇರೆ ಮಾರ್ಗ ಹುಡುಕಬೇಕಿತ್ತು. ಆದರೆ ಈಗ ಈ ಹೊಸ ಫೀಚರ್​ನಿಂದಾಗಿ ವಾಟ್ಸಾಪ್​ನಲ್ಲಿ ಎಲ್ಲವನ್ನೂ ಸೇವ್​ ಮಾಡಿಕೊಳ್ಳಬಹುದಾಗಿದೆ.

ನೀವು ಮಾಡಬೇಕಿರುವುದು ಇಷ್ಟು: ಹೊಸ ಚಾಟ್ ತೆರೆಯಿರಿ, ಸಂದೇಶಕ್ಕೆ ಸಂಪರ್ಕವನ್ನು ಆಯ್ಕೆಮಾಡುವಾಗ, ಪಟ್ಟಿಯ ಮೇಲ್ಭಾಗದಲ್ಲಿ ನಿಮ್ಮ ಸ್ವಂತ ಸಂಪರ್ಕಗಳು ಕಾಣಿಸುತ್ತವೆ. ಈ ಚಾಟ್ ಅನ್ನು ತೆರೆಯುವಾಗ “ನೀವೇ ಸಂದೇಶ ಕಳುಹಿಸಿ.” ಎಂಬ ಚಾಟ್ ಶೀರ್ಷಿಕೆಯು ಕಾಣಿಸುತ್ತದೆ.

ನಿಮಗೆ ಕಳುಹಿಸಲಾದ ಸಂದೇಶಗಳು ನಿಮ್ಮ ಎಲ್ಲಾ ಲಿಂಕ್ ಮಾಡಲಾದ ಸಾಧನಗಳಲ್ಲಿ ಗೋಚರಿಸುತ್ತವೆ. ವಾಟ್ಸಾಪ್​ ಈ ಚಾಟ್‌ಗಳಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಸಹ ನಿರ್ವಹಿಸುತ್ತದೆ. ನೀವು ಇದೀಗ ವೈಶಿಷ್ಟ್ಯವನ್ನು ನೋಡಲು ಸಾಧ್ಯವಾಗದಿದ್ದರೆ, ಇನ್ನೂ ಕೆಲವು ದಿನಗಳವರೆಗೆ ಕಾಯಬೇಕಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...