ದೇಶಾದ್ಯಂತ ಮತ್ತೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಕೊರೊನಾ ಮೂರನೇ ಅಲೆ ನಡೆಯುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಪ್ರತಿಯೊಬ್ಬರಿಗೂ ನೆಗಡಿ, ಜ್ವರ ಕಾಣಿಸಿಕೊಳ್ತಿದೆ. ಇದು ಸಾಮಾನ್ಯ ಜ್ವರವೇ ಅಥವಾ ಕೊರೊನಾ ಲಕ್ಷಣವೇ ಎಂಬುದು ಜನರಿಗೆ ಸರಿಯಾಗಿ ತಿಳಿಯುತ್ತಿಲ್ಲ. ನಿಮಗೂ ನೆಗಡಿ, ಜ್ವರವಿದ್ದರೆ ಚಿಂತಿಸಬೇಡಿ. ಮನೆಯಲ್ಲಿಯೇ ಕೊರೊನಾ ಪರೀಕ್ಷೆ ಮಾಡಿಕೊಳ್ಳಬಹುದು. ರಾಪಿಡ್ ಆಂಟಿಜೆನ್ ಕಿಟ್ ಮೂಲಕ ನೀವು ಮನೆಯಲ್ಲಿ ಕುಳಿತು ಕೊರೊನಾ ಪರೀಕ್ಷೆ ಮಾಡಬಹುದು.
ಈ ಕೊರೊನಾ ರಾಪಿಡ್ ಆಂಟಿಜೆನ್ ಕಿಟ್ ನ ಮಾರುಕಟ್ಟೆಯಲ್ಲಿ ಸಿಗ್ತಿದೆ. ಖರೀದಿ ಮಾಡುವಾಗ ಅದ್ರ ಸರಿಯಾಗಿ ಪರೀಕ್ಷಿಸಿ ಖರೀದಿ ಮಾಡಿ. ನಕಲಿ ಕಿಟ್ ಹಾವಳಿಯೂ ಹೆಚ್ಚಾಗಿದೆ. ಐಸಿಎಂಆರ್ 7 ಹೋಮ್ ಕಿಟ್ ಗಳಿಗೆ ಮಾತ್ರ ಅನುಮತಿ ನೀಡಿದೆ. ಅವುಗಳ ಬೆಲೆ 250ರಿಂದ 300 ರೂಪಾಯಿ ಒಳಗಿದೆ. CoviSelf, PanBio, KoviFind, Angcard, Cleantest, AbCheck ಮತ್ತು Ultra Covi Catch Home Kit ಇವುಗಳಲ್ಲಿ ಒಂದನ್ನು ಮಾತ್ರ ಖರೀದಿ ಮಾಡಿ.
ಇದರ ಮೂಲಕ ನೀವು ಸುಲಭವಾಗಿ ಕೊರೊನಾ ಪರೀಕ್ಷೆ ಮಾಡಿಕೊಳ್ಳಬಹುದು. 15 ನಿಮಿಷಗಳಲ್ಲಿ ನಿಮಗೆ ಫಲಿತಾಂಶ ಸಿಗುತ್ತದೆ. ಸ್ವ್ಯಾಬ್ ಮೂಲಕ ನೀವು ಪರೀಕ್ಷೆ ಮಾಡಿಕೊಳ್ಳಬೇಕು. ಪರೀಕ್ಷೆ ವೇಳೆ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.