ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಆಧಾರ್ ಕಾರ್ಡ್ ಅವಶ್ಯಕವಾಗಿ ಬೇಕು. ಪ್ರಮುಖ ದಾಖಲೆಗಳಲ್ಲಿ ಆಧಾರ್ ಒಂದಾಗಿದೆ. ಹೆಚ್ಚಾಗಿ ಇಂಗ್ಲಿಷ್ ಭಾಷೆಯಲ್ಲಿ ಆಧಾರ್ ಕಾರ್ಡ್ ಲಭ್ಯವಿದೆ. ದೇಶದ ಎಲ್ಲ ಜನರಿಗೂ ಇಂಗ್ಲೀಷ್ ಬರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಯುಐಡಿಎಐ ಪ್ರಾದೇಶಿಕ ಭಾಷೆಗಳಲ್ಲಿ ಆಧಾರ್ ಕಾರ್ಡ್ ತಯಾರಿಸುವ ಸೌಲಭ್ಯವನ್ನು ಪ್ರಾರಂಭಿಸಿದೆ. ಕನ್ನಡ ಸೇರಿದಂತೆ ಕೆಲ ಭಾಷೆಗಳಲ್ಲಿ ಈಗಾಗಲೇ ಆಧಾರ್ ಲಭ್ಯವಿದೆ.
ಇನ್ಮುಂದೆ ಆಧಾರ್ ಕಾರ್ಡ್ ನ್ನು ಇಂಗ್ಲಿಷ್, ಕನ್ನಡ ಅಸ್ಸಾಮೀಸ್, ಉರ್ದು, ಪಂಜಾಬಿ, ತಮಿಳು, ತೆಲುಗು, ಹಿಂದಿ, ಬಂಗಾಳಿ, ಗುಜರಾತಿ, ಒರಿಯಾ, ಮಲಯಾಳಂ ಮತ್ತು ಮರಾಠಿ ಭಾಷೆಗಳಲ್ಲಿ ಪಡೆಯಬಹುದು. ಆಧಾರ್‌ನಲ್ಲಿ ಭಾಷೆ ಬದಲಾಯಿಸಲು ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು.
ಆಧಾರ್ ನಲ್ಲಿ ಭಾಷೆ ನವೀಕರಿಸಲು ಮೊದಲು ಯುಐಡಿಎಐನ ಅಧಿಕೃತ ವೆಬ್‌ಸೈಟ್ https://uidai.gov.in/. ಗೆ ಹೋಗಬೇಕು. ನವೀಕರಣ ಆಧಾರ್ ವಿಭಾಗದ ಅಡಿಯಲ್ಲಿ, ನವೀಕರಣ ಜನಸಂಖ್ಯಾ ಡೇಟಾ ಆನ್‌ಲೈನ್ ಕ್ಲಿಕ್ ಮಾಡಿಬೇಕು. ಆಗ ಆಧಾರ್ ಸ್ವಯಂ ಸೇವಾ ನವೀಕರಣ ಪೋರ್ಟಲ್ ತೆರೆಯುತ್ತದೆ. ಈ ಪುಟದಲ್ಲಿ 12 ಅಂಕೆ ಆಧಾರ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಸೆಕ್ಯುರಿಟಿ ಕೋಡ್ ನಮೂದಿಸಿ, ಒಟಿಪಿ ಕಳುಹಿಸಲು ಕ್ಲಿಕ್ ಮಾಡಿ. ನೋಂದಾಯಿತ ಮೊಬೈಲ್ ಸಂಖ್ಯೆಗೆ 6 ಅಂಕೆಗಳ ಒನ್-ಟೈಮ್-ಪಾಸ್ವರ್ಡ್ ಬರುತ್ತದೆ. ಒಟಿಪಿ ನಮೂದಿಸಿ ಮತ್ತು ಲಾಗಿನ್ ಬಟನ್ ಕ್ಲಿಕ್ ಮಾಡಿ. ನಂತ್ರ ನವೀಕರಣ ಜನಸಂಖ್ಯಾ ಡೇಟಾ ಬಟನ್ ಕ್ಲಿಕ್ ಮಾಡಿ.
ಅಲ್ಲಿ ಎಲ್ಲಾ ಜನಸಂಖ್ಯಾ ಡೇಟಾದ ವಿವರ ಸಿಗುತ್ತದೆ. ಪ್ರಾದೇಶಿಕ ಭಾಷೆಯನ್ನು ಆರಿಸಿ. ಹೆಸರು ಮತ್ತು ವಿಳಾಸ, ಪೂರ್ವನಿಯೋಜಿತವಾಗಿ ಆಯ್ಕೆಯಾಗುತ್ತದೆ. ಹೆಸರನ್ನು ಈಗಾಗಲೇ ಸ್ಥಳೀಯ ಭಾಷೆಯಲ್ಲಿ ಸರಿಯಾಗಿ ಉಚ್ಚರಿಸಿದ್ದರೆ, ಹೆಚ್ಚಿನ ತಿದ್ದುಪಡಿ ಅಗತ್ಯವಿಲ್ಲ. ಕಾಗುಣಿತವನ್ನು ಒಮ್ಮೆ ಪರಿಶೀಲಿಸಿ, ವಿಳಾಸವನ್ನು ಪರಿಶೀಲಿಸಿ. ನಂತ್ರ ಪೂರ್ವವೀಕ್ಷಣೆಯ ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ಮಾಹಿತಿಯು ಸರಿಯಾಗಿದೆಯೇ ಎಂದು ಒಮ್ಮೆ ಪರಿಶೀಲಿಸಿ ನಂತರ ಮುಂದುವರಿಯಿರಿ. ಮೊಬೈಲ್‌ಗೆ ಒಂದು ಬಾರಿಯ ಪಾಸ್ವರ್ಡ್ ಬರುತ್ತದೆ. ಒಟಿಪಿ ನಮೂದಿಸುವ ಮೂಲಕ ಮುಂದುವರಿಯಬೇಕು.
ಆಧಾರ್ ಕಾರ್ಡ್‌ನ ಭಾಷೆಯನ್ನು ಬದಲಾಯಿಸಲು ಬಯಸಿದರೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದಕ್ಕಾಗಿ ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಪಾವತಿ ಮಾಡಬಹುದು. ಇದರ ನಂತರ ಹೊಸ ಭಾಷಾ ನವೀಕರಣದ ವಿನಂತಿಯನ್ನು ಆಧಾರ್‌ನಲ್ಲಿ ಸಲ್ಲಿಸಲಾಗುತ್ತದೆ. ಹೊಸ ಆಧಾರ್ ಡೌನ್ಲೋಡ್ ಮಾಡಬಹುದು.
ಆಧಾರ್ ಕಾರ್ಡ್‌ನಲ್ಲಿ ಭಾಷೆಯನ್ನು ನವೀಕರಿಸುವ 1 ರಿಂದ 3 ವಾರ ಬೇಕಾಗುತ್ತದೆ. ಆಧಾರ್ ಸೇವಾ ಕೇಂದ್ರದ ಮೂಲಕ ಸ್ಥಳೀಯ ಭಾಷೆಯ ಆಧಾರ್ ಪಡೆಯಬಹುದು.