alex Certify ಇಂಟರ್ನೆಟ್, ಮೊಬೈಲ್ ಡೇಟಾ ಇಲ್ಲದೆ PF ಬ್ಯಾಲೆನ್ಸ್ ಹೀಗೆ ಚೆಕ್ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಟರ್ನೆಟ್, ಮೊಬೈಲ್ ಡೇಟಾ ಇಲ್ಲದೆ PF ಬ್ಯಾಲೆನ್ಸ್ ಹೀಗೆ ಚೆಕ್ ಮಾಡಿ

ಪಿಎಫ್ ಖಾತೆಗೆ ಹಣ ವರ್ಗಾವಣೆಯಾಗಿದೆಯಾ,ಇಲ್ಲವಾ ಎಂಬುದನ್ನು ತಿಳಿದುಕೊಳ್ಳಲು ಇಂಟರ್ನೆಟ್ ಅವಶ್ಯಕತೆಯಿಲ್ಲ. ಮಿಸ್ಡ್ ಕಾಲ್ ಅಥವಾ ಎಸ್‌ಎಂಎಸ್ ಮೂಲಕ ಮೊಬೈಲ್‌ನಿಂದ ಸುಲಭವಾಗಿ ಪಿಎಫ್ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಬಹುದು.

ಮೋದಿ ಸರ್ಕಾರ, ಭವಿಷ್ಯ ನಿಧಿ ಬಡ್ಡಿ ಹಣವನ್ನು ಉದ್ಯೋಗಿಗಳ ಖಾತೆಗೆ ವರ್ಗಾವಣೆ ಮಾಡಿದೆ. ಖಾತೆಗೆ ಬಡ್ಡಿ ಬಂದಿದೆಯೇ ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದು. ಎಸ್ಎಂಎಸ್ ಮೂಲಕ ನೀವು ಖಾತೆ ಚೆಕ್ ಮಾಡಬಹುದು.

ಇಪಿಎಫ್ಒನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ EPFO ​​UAN LAN ಎಂದು ಬರೆದು 7738299899 ಗೆ ಕಳುಹಿಸಬೇಕು. ಇಂಗ್ಲಿಷ್‌ನಲ್ಲಿ ಮಾಹಿತಿ ಬೇಕಾದರೆ, LAN ಬದಲಿಗೆ ENG ಎಂದು ಬರೆಯಬೇಕು. ಹಿಂದಿಯಲ್ಲಿ ಬೇಕಾದಲ್ಲಿ HIN ಮತ್ತು ಕನ್ನಡದಲ್ಲಿ ಬೇಕಾದಲ್ಲಿ KAN ಎಂದು ಟೈಪ್ ಮಾಡಿ ಕಳುಹಿಸಬೇಕು.

ಎಲ್ಲರ ಗಮನ ಸೆಳೆಯುತ್ತಿದೆ ಮಾರುಕಟ್ಟೆಗೆ ಬಂದ ಹೊಸ ಕಾರಿನ ಲುಕ್

ಮಿಸ್ಡ್ ಕಾಲ್ ಮೂಲಕ ಕೂಡ ನೀವು ಖಾತೆ ವಿವರ ಪಡೆಯಬಹುದು. ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ಮಾಡಬೇಕು. ಆಗ ನಿಮ್ಮ ಖಾತೆ ಮಾಹಿತಿಯ ಸಂದೇಶ ನಿಮಗೆ ಬರುತ್ತದೆ.

ಇಪಿಎಫ್ ಪೋರ್ಟಲ್‌ ಮೂಲಕವೂ ನೀವು ಖಾತೆ ಬಗ್ಗೆ ಮಾಹಿತಿ ಪಡೆಯಬಹುದು. ಯುಎಎನ್ ಮತ್ತು ಪಾಸ್ವರ್ಡ್ ಹಾಕಿ ಪೋರ್ಟಲ್ ಲಾಗಿನ್ ಆಗ್ಬೇಕು. ಅಲ್ಲಿ ಡೌನ್ಲೋಡ್ ಅಥವಾ ವೀಕ್ಷಿಸಿ ಪಾಸ್ಬುಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಪಾಸ್ಬುಕ್ ಮಾಹಿತಿ ಸಿಗುತ್ತದೆ.

ಹರಳೆಣ್ಣೆಯ ಔಷಧೀಯ ಗುಣಗಳು

ಸ್ಮಾರ್ಟ್‌ಫೋನ್ ಇದ್ದರೆ ಉಮಾಂಗ್ ಅಪ್ಲಿಕೇಶನ್ ಮೂಲಕವೂ ನೀವು ಮಾಹಿತಿ ಪಡೆಯಬಹುದು.ಉಮಾಂಗ್ ಅಪ್ಲಿಕೇಶನ್ ತೆರೆಯಬೇಕು.ಅಲ್ಲಿ ಇಪಿಎಫ್ ಒ ಮೇಲೆ ಕ್ಲಿಕ್ ಮಾಡಬೇಕು.ಅಲ್ಲಿ Employee Centric Services ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.ಅಲ್ಲಿ View Passbook ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಯುಎಎನ್ ಹಾಗೂ ಪಾಸ್ವರ್ಡ್ ಹಾಕಬೇಕು. ಆಗ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ಹಾಕಿದ ನಂತ್ರ ಪಿಎಫ್ ಬ್ಯಾಲೆನ್ಸ್ ಕಾಣಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...