ಉದ್ಯೋಗ ಅಥವಾ ಬೇರೆ ಕೆಲಸದ ಕಾರಣ ಜನರು ಊರು ಬದಲಿಸುತ್ತಿರುತ್ತಾರೆ. ಪ್ರತಿ ಬಾರಿ ಬ್ಯಾಂಕ್ ಗೃಹ ಶಾಖೆಗೆ ಬಂದು ಕೆಲಸ ಮಾಡಲು ಸಾಧ್ಯವಿಲ್ಲ. ಅನೇಕರು ಬ್ಯಾಂಕ್ ಶಾಖೆ ಬದಲಿಸಲು ಬಯಸ್ತಾರೆ. ಇದಕ್ಕಾಗಿ ಬ್ಯಾಂಕ್ ಶಾಖೆಗೆ ಹೋಗಬೇಕಾಗಿಲ್ಲ. ಮನೆಯಲ್ಲೇ ಕುಳಿತು ಬ್ಯಾಂಕ್ ಶಾಖೆ ಬದಲಿಸಬಹುದು.
ಬೇರೆ ಬೇರೆ ಬ್ಯಾಂಕ್, ಬೇರೆ ಬೇರೆ ನಿಯಮಗಳನ್ನು ಹೊಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಾಗಿದ್ದರೆ, ಮೊದಲು ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರಬೇಕು. ನೆಟ್ ಬ್ಯಾಂಕಿಂಗ್ ಸೌಲಭ್ಯವಿಲ್ಲವೆಂದ್ರೆ ಮೊದಲು ಆ ಸೌಲಭ್ಯ ಪಡೆಯಿರಿ.
ನಂತ್ರ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಬೇಕು. www.onlinesbi.com ವೆಬ್‌ಸೈಟ್‌ಗೆ ಹೋಗಿ ಲಾಗಿನ್ ಆದ್ಮೇಲೆ ಇ-ಸೇವೆಗಳು ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.ಅಲ್ಲಿ ಖಾತೆ ವರ್ಗಾವಣೆ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಖಾತೆಯನ್ನು ವರ್ಗಾಯಿಸಲು ಬಯಸುವ ಶಾಖೆಯ ಕೋಡ್ ಹಾಕಬೇಕು. ನಂತ್ರ ಈಗಿರುವ ಶಾಖೆ ಕೋಡ್ ಹಾಕಬೇಕು. ಈಗ ಹೊಸ ಶಾಖೆಯ ಹೆಸರನ್ನು ನಮೂದಿಸಿ ಸಲ್ಲಿಸಬೇಕು. ನಂತ್ರ ಶಾಖೆ ಬದಲಾವಣೆ ವಿನಂತಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ವಿನಂತಿಯನ್ನು ಪರಿಶೀಲಿಸಿದ ನಂತ್ರ ಬ್ಯಾಂಕ್ ಅಧಿಕಾರಿಗಳು ಶಾಖೆ ಬದಲಿಸುತ್ತಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯನ್ನು ಕೂಡ ಮನೆಯಲ್ಲೇ ಕುಳಿತು ಬದಲಿಸಬಹುದು. ಮೊದಲು ರಿಟೇಲ್ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಆಗಬೇಕು. ಇದರ ನಂತರ ಇತರ ಸೇವೆಗಳ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಹೋಮ್ ಬ್ರಾಂಚ್ ಬದಲಿಸಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಈಗ ಖಾತೆಯನ್ನು ವರ್ಗಾಯಿಸಬೇಕಾದ ಶಾಖೆಯ ಐಡಿ ನಮೂದಿಸಬೇಕು.ಶಾಖೆಯ ಐಡಿಯನ್ನು ನಮೂದಿಸಿದ ನಂತರ ಮುಂದುವರಿಯಿರಿ ಮೇಲೆ ಕ್ಲಿಕ್ ಮಾಡಿ, ಪಾಸ್ವರ್ಡ್ ಹಾಕಬೇಕು. ಸಂಪೂರ್ಣ ಪ್ರಕ್ರಿಯೆಯ ನಂತರ ವಿನಂತಿಯನ್ನು ಬ್ಯಾಂಕ್ ಸ್ವೀಕರಿಸುತ್ತದೆ.