ವಿಮಾನದಲ್ಲಿ ಪ್ರಯಾಣ ಬೆಳೆಸುವುದು ಅನೇಕರ ಕನಸು. ಕೆಲವರು ವಿಮಾನ ಖರೀದಿ ಕಸನು ಕಾಣ್ತಾರೆ. ವಿಮಾನ ಖರೀದಿ ಮಾಡುವುದು ಕಷ್ಟವಾದ್ರೂ ಅಸಾಧ್ಯವೇನಲ್ಲ. ವಿಮಾನ ಖರೀದಿಗೆ ಸಾಲ ಪಡೆಯಬಹುದು.
ಖಾಸಗಿ ವಿಮಾನ ಖರೀದಿಸುವ ಮೊದಲು ಬೆಲೆಗಳನ್ನು ತಿಳಿದುಕೊಳ್ಳಬೇಕು. ವಿಮಾನದ ಕಂಪನಿ, ಗಾತ್ರ, ಆಸನ ಸಾಮರ್ಥ್ಯ, ಹೈಟೆಕ್ ವೈಶಿಷ್ಟ್ಯಗಳು, ಸೌಕರ್ಯಗಳು ಇತ್ಯಾದಿಗಳ ಆಧಾರದ ಮೇಲೆ ವಿಮಾನದ ಬೆಲೆ ನಿರ್ಧರಿಸಲಾಗುತ್ತದೆ. ಬೋಯಿಂಗ್ ವಿಶ್ವದ ಅತಿದೊಡ್ಡ ವಿಮಾನ ತಯಾರಕ ಕಂಪನಿ. ಈ ಅಮೇರಿಕನ್ ಕಂಪನಿಯು ಪ್ರಪಂಚದಾದ್ಯಂತ ವಿಮಾನಗಳನ್ನು ಪೂರೈಸುತ್ತದೆ.
ಭಾರತದಲ್ಲಿ ಬೋಯಿಂಗ್ ವಿಮಾನಗಳನ್ನು ಹೆಚ್ಚು ಬಳಸಲಾಗುತ್ತದೆ. ವಿಮಾನ ಮಾದರಿ ಮೇಲೆ ಬೆಲೆ ನಿರ್ಧಾರವಾಗುತ್ತದೆ. 775 ಕೋಟಿಗಳಿಂದ 3.5 ಸಾವಿರ ಕೋಟಿಗಳವರೆಗೆ ವಿಮಾನದ ಬೆಲೆಯಿದೆ. ವಿಮಾನ ಖರೀದಿ ಮಾಡಬೇಕೆಂದ್ರೆ ಸಾವಿರ ಕೋಟಿ ಕ್ಲಬ್‌ಗೆ ಸೇರಬೇಕು. ಹೆಲಿಕಾಪ್ಟರ್ ಖರೀದಿಸಲು ಕನಿಷ್ಠ 10 ಕೋಟಿ ಖರ್ಚು ಮಾಡಬೇಕಾಗುತ್ತದೆ.
20-36 ವರ್ಷ, ವಿಮಾನದ ಜೀವಿತಾವಧಿಯಾಗಿರುತ್ತದೆ. ಹೆಲಿಕಾಪ್ಟರ್ ಸರಾಸರಿ ವಯಸ್ಸು 15 ರಿಂದ 20 ವರ್ಷಗಳು. ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ಸೌಲಭ್ಯವನ್ನು ತೆಗೆದುಕೊಳ್ಳಬೇಕು. ಈ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಿಲ್ಲಿಸಲು ಸ್ಥಳವನ್ನು ಕಾಯ್ದಿರಿಸಬೇಕು. ಪಾರ್ಕಿಂಗ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಖಾಸಗಿ ವಿಮಾನ ಅಥವಾ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಬೇಕಾದಾಗ, ಸಂಬಂಧಪಟ್ಟ ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಏರ್ ಟ್ರಾಫಿಕ್ ಕಂಟ್ರೋಲ್ ಅನುಮತಿ ಪಡೆಯಬೇಕಾಗುತ್ತದೆ. ಖಾಸಗಿ ವಿಮಾನ ಅಥವಾ ಹೆಲಿಕಾಪ್ಟರ್ ಖರೀದಿಸಲು ಸಾಲ ಸಿಗುತ್ತದೆ. ಬ್ಯಾಂಕ್ ಗಳು ಸಾಲವನ್ನು ನೀಡುತ್ತವೆ.