ದಿಲೀಪ್ ರಾಜ್ ಅಭಿನಯದ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಚಿತ್ರದ ಬಿಡುಗಡೆ ದಿನಾಂಕ ಇತ್ತೀಚಿಗಷ್ಟೇ ಘೋಷಣೆಯಾಗಿದ್ದು, ಜನವರಿ 10 ಕ್ಕೆ ತೆರೆ ಮೇಲೆ ಬರಲಿದೆ.
ಚಿತ್ರತಂಡ ಇದೀಗ ‘ಸದಾ’ ಎಂಬ ಲಿರಿಕಲ್ ಹಾಡೊಂದನ್ನು ಪಿ ಆರ್ ಕೆ ಸ್ಟುಡಿಯೋಸ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದೆ. ಪದ್ಮಜಾ ಶ್ರೀನಿವಾಸನ್ ಈ ಹಾಡಿಗೆ ಧ್ವನಿಯಾಗಿದ್ದು, ಕೇಶವ ಮೂರ್ತಿ ಸಾಹಿತ್ಯ ಬರೆದಿದ್ದಾರೆ. ಇನ್ನುಳಿದಂತೆ ಪ್ರಸಾದ್ ಕೆ ಶೆಟ್ಟಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಕೇಶವಮೂರ್ತಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ದಿಲೀಪ್ ರಾಜ್ ಸೇರಿದಂತೆ ಶಿಲ್ಪ ಮಂಜುನಾಥ್, ಮಧುಸೂದನ್ ಗೋವಿಂದ್, ಅಪೂರ್ವ, ಅಜಯ್ ಶರ್ಮ ತೆರೆ ಹಂಚಿಕೊಂಡಿದ್ದು, ಪಿಕ್ಚರ್ ಶಾಪ್ ಮತ್ತು ನೇಟಿವ್ ಕ್ರಾಫ್ಟ್ ಬ್ಯಾನರ್ ನಲ್ಲಿ ಮಗೇಶ್ ರವೀಂದ್ರನ್ ಮತ್ತು ಕುಬೇಂದ್ರನ್ ನಿರ್ಮಾಣ ಮಾಡಿದ್ದಾರೆ. ಕುಬೇಂದ್ರನ್ ಸಂಕಲನ, ಹರ್ಷ ಕುಮಾರ್ ಗೌಡ ಛಾಯಾಗ್ರಾಹಣ ಹಾಗೂ ಕೇಶವಮೂರ್ತಿ ಸಂಭಾಷಣೆ ಬರೆದಿದ್ದಾರೆ.