alex Certify ಅಫ್ಘಾನ್ ಮಹಿಳಾ ನಿರೂಪಕಿಗೆ ಮನೆಗೆ ಹೋಗಲು ತಾಲಿಬಾನ್ ತಾಕೀತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಫ್ಘಾನ್ ಮಹಿಳಾ ನಿರೂಪಕಿಗೆ ಮನೆಗೆ ಹೋಗಲು ತಾಲಿಬಾನ್ ತಾಕೀತು

You are a woman, go home: Afghan female anchor recounts Taliban horror, watch video | World News | Zee Newsತಾಲಿಬಾನ್ ತೆಕ್ಕೆಗೆ ತಮ್ಮ ದೇಶದ ಆಡಳಿತ ಬಿದ್ದಾಗಿನಿಂದ ಮಹಿಳೆಯರ ಹಿತಾಸಕ್ತಿಗಳ ಬಗ್ಗೆ ಎಲ್ಲೆಲ್ಲೂ ಆತಂಕ ಸೃಷ್ಟಿಯಾಗಿರುವ ನಡುವೆ, ಕಾಬೂಲ್‌ನಲ್ಲಿ ಮಹಿಳೆಯರ ಗುಂಪೊಂದು ತಮ್ಮ ಹಕ್ಕುಗಳ ರಕ್ಷಣೆಗೆ ಕೋರಿ ಧರಣಿ ಕುಳಿತಿದೆ.

ಶರಿಯಾ ಕಾನೂನಿನ ಅನ್ವಯ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಾಗುವುದು ಎಂಬ ತಾಲಿಬಾನ್‌ನ ಮಾತುಗಳಲ್ಲಿ ಅಲ್ಲಿನ ಮಹಿಳೆಯರಿಗೆ ಸ್ವಲ್ಪವೂ ನಂಬಿಕೆ ಇಲ್ಲದಂತಾಗಿದೆ.

ಆರ್‌ಟಿಎ ಪಶ್ತೋ ಎಂಬ ಟಿವಿ ಸ್ಟೇಷನ್‌ ಒಂದರಲ್ಲಿ ಕೆಲಸ ಮಾಡುವ ಶಬನಮ್ ದಾ‌ವ್ರಾನ್‌ ಎಂಬ ಮಹಿಳಾ ನಿರೂಪಕಿಗೆ ತನ್ನ ಕಚೇರಿಗೆ ಮರಳಲು ಅನುಮತಿ ನಿರಾಕರಿಸಲಾಗಿದೆ. ತಮ್ಮ ದೈನಂದಿನ ಕೆಲಸದ ಅವಧಿಯಲ್ಲಿ ಕಚೇರಿಗೆ ಆಗಮಿಸಿದ ದಾವ್ರನ್‌ಗೆ ಐಡಿ ಕಾರ್ಡ್ ಇದ್ದರೂ ಸಹ, “ಆಧಿಕಾರ ಬದಲಾಗಿದೆ. ನಿಮ್ಮನ್ನು ಒಳಗೆ ಬಿಡುವುದಿಲ್ಲ, ಮನೆಗೆ ಹೋಗಿ” ಎಂದು ಹೇಳಲಾಗಿದೆ ಎಂದು ಖುದ್ದು ನಿರೂಪಕಿ ವಿಡಿಯೋವೊಂದರಲ್ಲಿ ಹೇಳಿದ್ದಾರೆ.

ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ‍್ಯ ಕೊಡುವುದಾಗಿ ಹೇಳಿದ ತಾಲಿಬಾನ್ ಮಾತುಗಳೆಲ್ಲಾ ಸುಳ್ಳು ಎಂಬ ಮಾತುಗಳನ್ನು ಈ ವಿಡಿಯೋ ಇನ್ನಷ್ಟು ಬಲಗೊಳಿಸಿದೆ.

https://twitter.com/MuslimShirzad/status/1427982504443645963?ref_src=twsrc%5Etfw%7Ctwcamp%5Etweetembed%7Ctwterm%5E1427982504443645963%7Ctwgr%5E%7Ctwcon%5Es1_&ref_url=https%3A%2F%2Fzeenews.india.com%2Fworld%2Fyou-are-a-woman-go-home-afghan-female-anchor-recounts-taliban-horror-watch-video-2386620.html

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...