ಶ್ರೀಲಂಕಾದ ಗಾಯಕ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರ ಮನಿಕೆ ಮಾಗೆ ಹಿತೆ ಹಾಡು ಭಾರತದಲ್ಲಿ ಅದೆಷ್ಟು ಜನಪ್ರಿಯವಾಗಿದೆಯೆಂದ್ರೆ, ಇನ್ಸ್ಟಾಗ್ರಾಂ ತುಂಬೆಲ್ಲಾ ಈ ಹಾಡೇ ಕಾಣಿಸಿಕೊಂಡಿದೆ. ಸೆಲೆಬ್ರೆಟಿಗಳು ಸೇರಿದಂತೆ ಹಲವಾರು ಮಂದಿ ಈ ಹಾಡಿಗೆ ವಿಭಿನ್ನವಾಗಿ ನೃತ್ಯ ಕೂಡ ಮಾಡಿದ್ದಾರೆ. ಇದೀಗ ಟಿಬೆಟಿಯನ್ ರ್ಯಾಪರ್ಸ್ ಈ ಹಾಡನ್ನು ತನ್ನ ಶೈಲಿಯಲ್ಲಿ ಹಾಡಿದ್ದು, ಎಲ್ಲರ ಗಮನ ಸೆಳೆದಿದೆ.
ಮನಿಕೆ ಮಾಗೆ ಹಿತೆಯ ಟಿಬೆಟಿಯನ್ ರೀಮಿಕ್ಸ್ ಆವೃತ್ತಿಯನ್ನು ಕಳೆದ ತಿಂಗಳಾರಂಭದಲ್ಲಿ ಯೂಟ್ಯೂಬ್ನಲ್ಲಿ ಹಂಚಿಕೊಳ್ಳಲಾಗಿತ್ತು. ಗಾಯಕರಾದ ಟೆನ್ಜಿನ್ ಡೆಕ್ಯೊಂಗ್, ಟೆನ್ಜಿನ್ ಪೈಕ್ಸ್, ಉಗೆನ್ ನಾರ್ಬು (ನಮ್ಗ್ಯಾಲ್ ನಾಂಗ್ಮಿ), ಟೆನ್ಜಿನ್ ಕೂಲೆಸ್ಟ್ ವೈರಲ್ ಹಾಡಿಗೆ ಹೊಸ ಟ್ವಿಸ್ಟ್ ನೀಡಿದ್ದಾರೆ. ಸದ್ಯ ಈ ಹಾಡಿನ ವಿಡಿಯೋ ವೈರಲ್ ಆಗಿದ್ದು, 35,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಈ ರೀಮಿಕ್ಸ್ ಟ್ರ್ಯಾಕ್ನ ಸುಂದರವಾದ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಸಹ ಹಂಚಿಕೊಳ್ಳಲಾಗಿದೆ. ಹೊಸ ಶೈಲಿಯ ಮನಿಕೆ ಮಾಗೆ ಹಿತೆ ಹಾಡು ಕೇಳಿದ ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸುವವರಂತೆ ಮಾಡಿದೆ. ಹಾಡನ್ನು ಇಷ್ಟಪಟ್ಟಿರುವ ನೆಟ್ಟಿಗರು ಗಾಯಕರನ್ನು ಶ್ಲಾಘಿಸಿದ್ದಾರೆ.