ಕೇದಾರನಾಥದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ತಯಾರಿಸಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಇದೀಗ ಇಂಡಿಯಾ ಗೇಟ್ ನಲ್ಲಿನ ಹಿಂದಿನ ಅಮರ್ ಜವಾನ್ ಜ್ಯೋತಿ ಹಿಂದೆ ಸ್ಥಾಪಿಸಲುದ್ದೇಶಿಸಿರುವ 30 ಅಡಿ ಎತ್ತರದ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ಸಿದ್ಧಪಡಿಸಲಿದ್ದಾರೆ.
ಇದು ಏಕಶಿಲಾ ಮೂರ್ತಿಯಾಗಲಿದ್ದು, ಭಾರೀ ಗಾತ್ರದ ಕಪ್ಪು ಗ್ರಾನೈಟ್ ಶಿಲೆಯಿಂದ ಕೆತ್ತಲಾಗುತ್ತದೆ. ಕೆತ್ತನೆಗೆ ಮುನ್ನ ಈ ಗ್ರಾನೈಟ್ ಅನ್ನು ದೆಹಲಿಗೆ ಕೊಂಡೊಯ್ಯಲಾಗುತ್ತದೆ.
ಬೇರ್ಪಟ್ಟಿದ್ದ ಸಲಿಂಗಿ ದಂಪತಿಯನ್ನು ಒಂದುಗೂಡಿಸಿದ ಕೇರಳ ಹೈಕೋರ್ಟ್
ಕೇಂದ್ರ ಸಂಸ್ಕೃತಿ ಸಚಿವಾಲಯದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನ ತಜ್ಞರ ತಂಡವು ಈ ಪ್ರತಿಮೆಯ ವಿನ್ಯಾಸ ಮಾಡಿದೆ. ಸಚಿವಾಲಯದ ಪ್ರಧಾನ ನಿರ್ದೇಶಕ ಅದ್ವೈತ ಗಡನಾಯಕ್ ಅವರು ಈ ತಂಡದ ನೇತೃತ್ವ ವಹಿಸಿದ್ದಾರೆ.
ಕಳೆದ ತಿಂಗಳು ಯೋಗಿರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಎರಡು ಅಡಿ ಎತ್ತರದ ಬೋಸ್ ಪ್ರತಿಮೆಯನ್ನು ನೀಡಿದ್ದರು. ಇದರ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದ ಮೋದಿ, ನೇತಾಜಿ ಬೋಸ್ ಅವರ ಅಭೂತಪೂರ್ವ ಶಿಲ್ಪಕಲೆಗೆ ಧನ್ಯವಾದಗಳು ಎಂದಿದ್ದರು.