ಉತ್ತರ ಪ್ರದೇಶದಲ್ಲಿ ಬಿಜೆಪಿಯ ದೊಡ್ಡ ಗೆಲುವು ಕಂಡಿದ್ದು, ಸಿಎಂ ಯೋಗಿ ಆದಿತ್ಯನಾಥ್ ಇತಿಹಾಸ ನಿರ್ಮಿಸಿದ್ದಾರೆ. ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಪಂಜಾಬ್ ಆಮ್ ಆದ್ಮಿ ಪಕ್ಷದ ಪಾಲಾಗಿದೆ.
ಯೋಗಿ ಆದಿತ್ಯನಾಥ್ ಅವರು ತಮ್ಮ ಟೀಕಾಕಾರರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷ ವಿಭಜಿಸುವ ರಾಜಕೀಯ ಮಾಡಿದ್ದಾರೆ ಮತ್ತು ಕೋವಿಡ್ -19 ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಅವರ ವಿರುದ್ಧ ಆರೋಪ ಕೇಳಿ ಬಂದಾಗ ಯೋಗಿ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದೆಲ್ಲಾ ಹೇಳಲಾಗಿತ್ತು. ಆದರೆ ಪ್ರಚಂಡ ವಿಜಯದೊಂದಿಗೆ ಯೋಗಿ ತಮ್ಮ ಟೀಕಾಕಾರರನ್ನು ಮೌನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
2022 ರ ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 273 ಸ್ಥಾನಗಳನ್ನು ಗಳಿಸಿದ ಈ ದೊಡ್ಡ ಗೆಲುವಿನೊಂದಿಗೆ ಯೋಗಿ ಮತ್ತು ಬಿಜೆಪಿಗೆ ಹೋಳಿ ಬೇಗನೆ ಬಂದಿದೆ.
ತಮ್ಮ ಮೊದಲ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್ಪುರ ನಗರ ಕ್ಷೇತ್ರದಿಂದ 1,03,390 ಅಂತರದಿಂದ ಗೆದ್ದಿದ್ದಾರೆ.
ಆದಿತ್ಯನಾಥ್ ಶಾಸಕರಾಗಿ ಆಯ್ಕೆಯಾಗುತ್ತಿರುವುದು ಇದೇ ಮೊದಲು. ಈ ಹಿಂದೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು.
2017 ರಲ್ಲಿ ಯುಪಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು, ಅವರು 1998 ರಿಂದ 2017 ರವರೆಗೆ ಸತತ ಐದು ಅವಧಿಗೆ ಗೋರಖ್ ಪುರ ಸಂಸದರಾಗಿದ್ದರು. 26 ನೇ ವಯಸ್ಸಿನಲ್ಲಿ, ಆದಿತ್ಯನಾಥ್ ಅವರು ಅತ್ಯಂತ ಕಿರಿಯ ಲೋಕಸಭಾ ಸಂಸದರಾಗಿದ್ದರು.
2017 ರ ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಅವರನ್ನು ಯುಪಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ ನಂತರ, ಯೋಗಿ ಅವರು ಗೃಹ, ಅರ್ಥಶಾಸ್ತ್ರ ಮತ್ತು ಅಂಕಿಅಂಶಗಳು, ಸೈನಿಕ್ ಕಲ್ಯಾಣ, ಗೃಹರಕ್ಷಕ, ಸಿಬ್ಬಂದಿ ಮತ್ತು ನೇಮಕಾತಿ ಮತ್ತು ನಾಗರಿಕ ರಕ್ಷಣಾ ಸೇರಿದಂತೆ 36 ಸಚಿವಾಲಯಗಳನ್ನು ತಮ್ಮ ನೇರ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರು.
ಯೋಗಿ ಗೋರಖ್ ಪುರದ ಹಿಂದೂ ದೇವಾಲಯವಾಗಿರುವ ಗೋರಖನಾಥ ಮಠದ ಪ್ರಧಾನ ಅರ್ಚಕರೂ ಆಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಯುಪಿ ಮುಖ್ಯಮಂತ್ರಿಯಾಗಿ ಅವರ ಕೆಲಸವನ್ನು ಶ್ಲಾಘಿಸುವ ಮೂಲಕ ಅವರನ್ನು ಆಗಾಗ್ಗೆ ಅನುಮೋದಿಸಿದ್ದಾರೆ. ಪಿಎಂ ಮೋದಿ ಅವರು ಯುಪಿ ಪ್ಲಸ್ ಯೋಗಿ ಬಹುತ್ ಹೈ ಉಪಯೋಗಿ” (ಯುಪಿ ಪ್ಲಸ್ ಯೋಗಿ ತುಂಬಾ ಉಪಯುಕ್ತ) ಎಂಬ ಹೊಸ ಘೋಷಣೆಯನ್ನು ರಚಿಸಿದ್ದಾರೆ.
ಗೋರಖ್ಪುರ ಸದರ್ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿತ್ತು, ಜನಸಂಘದ ದಿನಗಳಿಂದ ಪಕ್ಷವು 1967 ರಿಂದ ಸೋತಿರಲಿಲ್ಲ.
ಉತ್ತರ ಪ್ರದೇಶದಿಂದ ಉತ್ತರಾಖಂಡವನ್ನು ಬೇರೆಯಾದ ನಂತರ ಅಧಿಕಾರಕ್ಕೆ ಮರಳಿದ ಮೊದಲ ಸಿಎಂ ಯೋಗಿ ಆದಿತ್ಯನಾಥ್. 1985ರಲ್ಲಿ ಸತತ ಅವಧಿಗೆ ಅವಿಭಜಿತ ಉತ್ತರಪ್ರದೇಶದ ಕೊನೆಯ ಮುಖ್ಯಮಂತ್ರಿಯಾಗಿದ್ದವರು ಕಾಂಗ್ರೆಸ್ ನಾಯಕ ಎನ್.ಡಿ. ತಿವಾರಿ.
ಗೆಲುವಿನ ನಂತರ ಯೋಗಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿ, ನಾವು ಕೆಲಸ ಮಾಡುತ್ತಿದ್ದೆವು, ಆದರೆ ಅವರು ತಪ್ಪು ಮಾಹಿತಿ ಪ್ರಚಾರ ನಡೆಸುತ್ತಿದ್ದರು. ರಾಜ್ಯದ ವೈಶಾಲ್ಯತೆ ಗಮನದಲ್ಲಿಟ್ಟುಕೊಂಡು ಎಲ್ಲರೂ ಯುಪಿ ಮೇಲೆ ಕಣ್ಣಿಟ್ಟಿದ್ದರು. ನಮ್ಮನ್ನು ಬಹುಮತದಿಂದ ಗೆಲ್ಲುವಂತೆ ಮಾಡಿದ್ದಕ್ಕಾಗಿ ನಾನು ಜನರಿಗೆ ಧನ್ಯವಾದ ಹೇಳುತ್ತೇನೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಾವು ಯುಪಿ, ಗೋವಾ, ಮಣಿಪುರ ಮತ್ತು ಉತ್ತರಾಖಂಡದಲ್ಲಿ ಸರ್ಕಾರಗಳನ್ನು ರಚಿಸುತ್ತೇವೆ ಎಂದು ಹೇಳಿದರು.