ಮೊಸರು ಹೆಚ್ಚಿನ ಪ್ರಮಾಣದ ಸತು ಮತ್ತು ಲ್ಯಾಕ್ಟಿಕ್ ಆಮ್ಲಗಳನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಇದರಿಂದ ನಿಮ್ಮ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಹಾಗಾಗಿ ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಮೊಸರನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳಿ.
*ಚರ್ಮದ ಆರೋಗ್ಯಕ್ಕಾಗಿ 2 ಚಮಚ ಮೊಸರನ್ನು 1 ಚಮಚ ಜೇನುತುಪ್ಪಕ್ಕೆ ಬೆರೆಸಿ ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿ. ಇದರಿಂದ ಚರ್ಮದ ತೇವಾಂಶ ಹೆಚ್ಚಾಗುತ್ತದೆ. ಹಾಗೇ ಮೊಸರು ಸನ್ ಬರ್ನ್ ನ್ನು, ಕಲೆ, ಶುಷ್ಕ ಚರ್ಮವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮೊಸರನ್ನು ಮುಖಕ್ಕೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ.