ಯೋಗ ಎನ್ನುವುದು ಒಂದು ದಿನ ಮಾಡುವ ಕಾಯಕವಲ್ಲ. ಈ ಯೋಗಕ್ಕೆಂದೇ ದಿನಕ್ಕೆ ಒಂದಿಷ್ಟು ಸಮಯ ಮೀಸಲಾಗಿಟ್ಟರೆ, ನಮ್ಮ ದೇಹ ಮತ್ತು ಮನಸ್ಸಿಗೆ ಆಗುವ ಲಾಭಗಳು ಅಪಾರ. ಹಾಗಂತ ಯೋಗ, ಒಂದು ಅಥವಾ ಎರಡು ದಿನದಲ್ಲಿ ಕಲಿಯೋದು ಅಸಾಧ್ಯ. ತಾಳ್ಮೆ, ಶ್ರದ್ಧೆ, ಹಾಗೂ ಆಸಕ್ತಿ ಇದ್ದರೆನೇ ಯೋಗ ಅನ್ನೊ ವಿದ್ಯೆ ಹಂತ-ಹಂತವಾಗಿ ಒಲಿಯುತ್ತೆ.
ದುಬೈನಲ್ಲಿ ವಾಸಿಸುವ ಯೋಗ ತರಬೇತಿದಾರ ಆಗಿರೋ ಯಶ್ ಮೊರಾಡಿಯಾ, ಈಗ ಇದೇ ಯೋಗದಲ್ಲಿ ಗಿನ್ನೆಸ್ ವಿಶ್ವದಾಖಲೆ ಮಾಡಿದ್ದಾರೆ. ಇವರು ಸತತ 29 ನಿಮಿಷ ವೃಶ್ಚಿಕಾಸನ ಅಂದರೆ ಚೇಳಿನ ಆಕಾರದ ಭಂಗಿ ಮಾಡಿ ತೋರಿಸಿದ್ದಾರೆ. ಇದೇ ಆಸನವನ್ನ ಈ ಹಿಂದೆ 4 ನಿಮಿಷ 27 ಸೆಕೆಂಡ್ ಮಾಡಿದ್ದು ದಾಖಲೆ ಎನ್ನಲಾಗಿದೆ. ಈಗ ಅದೇ ದಾಖಲೆಯನ್ನ ಯಶ್ ಅವರು ಬ್ರೇಕ್ ಮಾಡಿದ್ದಾರೆ.
ಗಂಡನಿಂದ ದೂರವಾದ ಮಹಿಳೆ ಮದುವೆಯಾಗಲು ಪೀಡಿಸಿದ ಸಂಬಂಧಿಯಿಂದಲೇ ಘೋರ ಕೃತ್ಯ
22 ವರ್ಷದ ಯಶ್, ಶಾಲಾದಿನಗಳಿಂದಲೇ ಯೋಗಾಭ್ಯಾಸವನ್ನ ಆರಂಭಿಸಿದ್ದಾರೆ. ಆ ನಂತರ ಯೋಗಕ್ಕೆಂದೇ ಸಮಯ ಮೀಸಲಾಗಿಟ್ಟು ಯೋಗಾಭ್ಯಾಸ ಮಾಡಿಕೊಂಡು ಬಂದಿದ್ದಾರೆ. ಯೋಗಾಸಕ್ತರಾಗಿರೋ ಯಶ್ ಇದರ ಕುರಿತಾಗಿ ಹೆಚ್ಚಿನ ಅಧ್ಯಯನ ಕೂಡಾ ನಡೆಸಿದ್ದಾರೆ. ವಿವಿಧ ಚಾಂಪಿಯನ್ ಶಿಪ್‌ಗಳಲ್ಲಿ ಭಾಗವಹಿಸಿ ಯೋಗದ ಮಹತ್ವವನ್ನ ಬೇರೆಯವರಿಗೆ ಮನವರಿಕೆ ಮಾಡಿಸುತ್ತಿದ್ದಾರೆ.
ಇಂದು ಯೋಗ ತರಬೇತುದಾರರಾಗಿ ಅನೇಕರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಯೋಗದ ಕುರಿತಾಗಿ ಯಶ್ ಅವರು ಹೇಳುವುದೇನೆಂದರೆ ‘ಯೋಗ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. ಅಷ್ಟೆ ಅಲ್ಲ ನಮ್ಮ ಸೀಮಿತವಾಗಿರೋ ಆಲೋಚನೆಯ ಸಾಮರ್ಥ್ಯವನ್ನ ಉತ್ತಮವಾಗಿರಿಸಿಕೊಳ್ಳಲು ಸಹ ಉಪಯೋಗವಾಗುತ್ತೆ.