ಜಾವಾ ಹಾಗೂ ಬಿಎಸ್‌ಎ ಮೋಟರ್‌ಸೈಕಲ್ಸ್ (ಯುಕೆ) ಬಳಿಕ ಮಹಿಂದ್ರಾ ಮಾಲೀಕತ್ವದ ಕ್ಲಾಸಿಕ್ ಲೆಜೆಂಡ್ಸ್ ಇದೀಗ ಯೆಜ್ಡಿ ಬ್ರಾಂಡ್‌ನ ಮೋಟರ್ ಬೈಕನ್ನು ಮರುಪರಿಚಯಿಸಿದೆ. 1990ರ ದಶಕದಲ್ಲಿ ಭಾರತದ ರಸ್ತೆಗಳಲ್ಲಿ ರಾರಾಜಿಸುತ್ತಿದ್ದ ಈ ಬೈಕ್‌ಗಳು ಈಗ ಎರಡೂವರೆ ವರ್ಷಗಳ ಬಳಿಕ ಮತ್ತೆ ಬಂದಿವೆ.
ಈ ಬೈಕನ್ನು ಮೂರು ಅವತಾರಗಳಲ್ಲಿ — ಯೆಜ್ಡಿ ರೋಡ್‌ಸ್ಟರ್, ಯೆಜ್ಡಿ ಸ್ಕ್ರಾಂಬ್ಲರ್, ಯೆಜ್ಡಿ ಅಡ್ವೆಂಚರ್. ಇವುಗಳ ಪೈಕಿ ರೋಡ್‌ಸ್ಟರ್ ಮತ್ತು ಅಡ್ವೆಂಚರ್‌ಗಳು ಭಾರೀ ಗಮನ ಸೆಳೆಯುತ್ತಿವೆ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮತ್ತು ಕೆಟಿಎಂ 250 ಅಡ್ವೆಂಚರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಆದರೆ ಯೆಜ್ಡಿ ಸ್ಕ್ರಾಂಬ್ಲರ್ ಹಾಗೂ ಹೋಂಡಾ CB350RSಗಳ ನಡುವೆ ಯಾವುದನ್ನು ಖರೀದಿ ಮಾಡಬೇಕೆಂದು ಬಹಳಷ್ಟು ಮಂದಿಗೆ ಜಿಜ್ಞಾಸೆ ಇದ್ದು, ನಿಮಗೆ ಈ ಲೇಖನ ಆ ಗೊಂದಲ ಪರಿಹಾರ ಮಾಡಲು ನೆರವಾಗಬಹುದು.
ಯೆಜ್ಡಿ ಸ್ಕ್ರ್ಯಾಂಬ್ಲರ್ vs ಹೋಂಡಾ CB350RS
ಈ ಎರಡೂ ಬೈಕ್‌ಗಳು ಸ್ಕ್ರ್ಯಾಂಬ್ಲರ್‌ಗಳಾಗಿ ಅಭಿವೃದ್ಧಿಪಡಿಸಿ, ಕಠಿಣವಾದ ರಸ್ತೆಗಳನ್ನು ನಿಭಾಯಿಸಲು ಸಮರ್ಥವಿರುವಂತೆ ರಚಿಸಲಾಗಿದೆ. ಈ ನಿಟ್ಟಿನಲ್ಲಿ, ಹೋಂಡಾ CB350RS ನ 168ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ಗೆ ಪ್ರತಿಯಾಗಿ 200ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಯೆಜ್ಡಿ ಸ್ಕ್ರ್ಯಾಂಬ್ಲರ್ ಹೆಚ್ಚು ಪ್ರಾಯೋಗಿಕವಾಗಿದೆ.
ಆದಾಗ್ಯೂ, ಯೆಜ್ಡಿಗೆ ಹೋಲಿಸಿದರೆ ಹೋಂಡಾ ಬೈಕ್ ಕಡಿಮೆ ತೂಕ ಹೊಂದಿದ್ದು, ಅನನುಭವಿ ಸವಾರರಿಗೂ ಸಹ ಇದನ್ನು ನಿರಾಳವಾಗಿ ನಿರ್ವಹಿಸಬಹುದಾಗಿದೆ. ತೂಕದ ವಿಚಾರ ಬಂದಾಗ, ಯೆಜ್ಡಿ ಸ್ಕ್ರಾಂಬ್ಲರ್ 182ಕೆಜಿ ತೂಕ ಹೊಂದಿದ್ದು, ಹೋಂಡಾ CB350RS 179 ಕೆಜಿ ತೂಕವಿದ್ದು ಈ ವಿಚಾರದಲ್ಲಿ ಹೇಳಿಕೊಳ್ಳುವಂತ ವ್ಯತ್ಯಾಸವೇನಿಲ್ಲ.
ಎಂಜಿನ್ ಸ್ಪೆಕ್ಸ್
ಯೆಜ್ಡಿ ಸ್ಕ್ರ್ಯಾಂಬ್ಲರ್ 334ಸಿಸಿ, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಜೊತೆಗೆ 29 ಬಿಎಚ್‌ಪಿ ಮತ್ತು 28 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಈ ಪವರ್‌ಪ್ಲಾಂಟ್ ಅನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. CB350RS, ಆದಾಗ್ಯೂ, 348.36ಸಿಸಿ, ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಜೊತೆಗೆ 21ಬಿಎಚ್‌ಪಿ ಮತ್ತು 30ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ ಆದರೆ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ ಬರುತ್ತದೆ.
ಸಸ್ಪೆನ್ಶನ್ ಮತ್ತು ಬ್ರೇಕಿಂಗ್ ಹಾರ್ಡ್‌ವೇರ್
ಯೆಜ್ಡಿ ಸ್ಕ್ರ್ಯಾಂಬ್ಲರ್ ಗ್ಯಾಸ್-ಚಾರ್ಜ್ಡ್ ಟ್ವಿನ್ ರಿಯರ್ ಶಾಕ್ ಅಬ್ಸಾರ್ಬರ್‌ಗಳೊಂದಿಗೆ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಪ್ರಿಲೋಡ್ ಹೊಂದಾಣಿಕೆಯೊಂದಿಗೆ ಬಳಸುತ್ತದೆ. ಮತ್ತೊಂದೆಡೆ ಹೋಂಡಾ CB350RS ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಟ್ವಿನ್-ಹೈಡ್ರಾಲಿಕ್ ರಿಯರ್ ಶಾಕ್‌ಗಳೊಂದಿಗೆ ಬರುತ್ತದೆ. ಬ್ರೇಕಿಂಗ್ ಶಕ್ತಿಗೆ ಸಂಬಂಧಿಸಿದಂತೆ; ಯೆಜ್ಡಿ ಸ್ಕ್ರ್ಯಾಂಬ್ಲರ್ ಡ್ಯುಯಲ್-ಚಾನೆಲ್ ಎಬಿಎಸ್‌ನೊಂದಿಗೆ 320ಎಂಎಂ ಮುಂಭಾಗ ಮತ್ತು 240ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ಬಳಸುತ್ತದೆ ಆದರೆ ಸಿಬಿ350ಆರ್‌ಎಸ್ 310ಎಂಎಂ ಮುಂಭಾಗ ಮತ್ತು 240ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ಡ್ಯುಯಲ್-ಚಾನೆಲ್ ಎಬಿಎಸ್‌ನೊಂದಿಗೆ ಹೊಂದಿದೆ.
ಭಾರತದಲ್ಲಿ ಈ ಬೈಕ್‌ಗಳ ಬೆಲೆ ಎಷ್ಟು
ಭಾರತದಲ್ಲಿ ಯೆಜ್ಡಿ ಸ್ಕ್ರ್ಯಾಂಬ್ಲರ್‌ನ ಬೆಲೆ ₹2,04,900 — ₹2,10,900ರವರೆಗೂ ಹೋಗುತ್ತದೆ. ಮತ್ತೊಂದೆಡೆ, ಹೋಂಡಾ CB350RS, ಮೊನೊಟೋನ್ ರೂಪಾಂತರಕ್ಕೆ ₹2,01,239 ಬೆಲೆ ಇದ್ದರೆ, CB350RS ಡ್ಯುಯಲ್-ಟೋನ್ ರೂಪಾಂತರವು ₹2,01,868 ಬೆಲೆ ಹೊಂದಿದೆ. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋ ರೂಂ ಹಂತದ್ದಾಗಿವೆ.