alex Certify Shocking: ನಡುರಸ್ತೆಯಲ್ಲೇ ಹೊತ್ತಿ ಉರಿದ ಮತ್ತೊಂದು ಎಲೆಕ್ಟ್ರಿಕ್ ಬೈಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ನಡುರಸ್ತೆಯಲ್ಲೇ ಹೊತ್ತಿ ಉರಿದ ಮತ್ತೊಂದು ಎಲೆಕ್ಟ್ರಿಕ್ ಬೈಕ್

ಎಲೆಕ್ಟ್ರಿಕ್​ ಬೈಕ್​ಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿರುವ ಘಟನೆಗಳಿಗೆ ಮತ್ತೊಂದು ಸೇರ್ಪಡೆ ಎಂಬಂತೆ ತೆಲಂಗಾಣದ ವಾರಂಗಲ್​​ನಲ್ಲಿ ಪ್ಯೂರ್​ಇವಿಯ ಎಲೆಕ್ಟ್ರಿಕ್​ ಸ್ಕೂಟರ್​​​ ಬೆಂಕಿಗಾಹುತಿಯಾಗಿದೆ. ಈ ಮೂಲಕ ದೇಶದಲ್ಲಿ ಬೇಸಿಗೆ ಆರಂಭವಾದಾಗಿನಿಂದ ಸರಿ ಸುಮಾರು ಎರಡು ಡಜನ್​​ಗಳಷ್ಟು ಬೈಕುಗಳು ಅಗ್ನಿಗಾಹುತಿಯಾದಂತಾಗಿದೆ. ಕಳೆದ 7 ತಿಂಗಳಲ್ಲಿ ಬೆಂಕಿಗೆ ಹೊತ್ತಿ ಉರಿದ ಪ್ಯೂರ್​ ಇವಿಯ ನಾಲ್ಕನೇ ಸ್ಕೂಟರ್​ ಇದಾಗಿದೆ.

ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿರುವ 36 ಸೆಕೆಂಡುಗಳ ವಿಡಿಯೋ ತುಣುಕಿನಲ್ಲಿ ಕೆಂಪು ಬಣ್ಣದ ಇಪ್ಲುಟೊ ಸ್ಕೂಟರ್​ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ರಸ್ತೆಯ ಪಕ್ಕದಲ್ಲಿ ನಿಲ್ಲಿಸಲಾದ ಬೈಕ್​ ಈ ರೀತಿ ಧಗ ಧಗ ಎಂದು ಉರಿದಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ಎರಡು ಪ್ಯೂರ್ ಇವಿ ಸ್ಕೂಟರ್‌ಗಳಿಗೆ ಇದೇ ರೀತಿ ಬೆಂಕಿ ಕಾಣಿಸಿಕೊಂಡಿತ್ತು. ಅದೇ ರೀತಿ ಈ ವರ್ಷದ ಮಾರ್ಚ್‌ನಲ್ಲಿ ಚೆನ್ನೈ ಬಳಿ ಮತ್ತೊಂದು ಸ್ಕೂಟರ್ ಧಗ ಧಗ ಎಂದು ಉರಿದಿತ್ತು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...