ಹಳದಿ ಫಂಗಸ್ ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುತ್ತದೆ. ಕೊರೋನಾ ಸೋಂಕಿನಿಂದ ಗುಣಮುಖರಾದವರೂ ಕೂಡ ಎಚ್ಚರಿಕೆ ವಹಿಸಬೇಕಿದೆ. ಗಾಯಗಳಾಗಿ ಕೀವು ಸೋರುತ್ತಿದ್ದರೆ, ಸುಸ್ತಾಗುತ್ತಿದ್ದರೆ, ಊಟ ಬೇಡ ಅನ್ನಿಸಿದರೆ, ಕಣ್ಣುಗಳು ಒಳ ಹೋದರೆ ಇದೆಲ್ಲವೂ ಹಳದಿ ಫಂಗಸ್ ಗುಣಲಕ್ಷಣಗಳು ಆಗಿರುತ್ತವೆ ಎಂದು ಹೇಳಲಾಗಿದೆ.
ಹಳದಿ ಫಂಗಸ್ ಬಗ್ಗೆ ಬೇಗನೆ ನೋಡಿಕೊಳ್ಳದಿದ್ದರೆ ರಕ್ತದಲ್ಲಿ ಸೇರುತ್ತದೆ. ರಕ್ತದಲ್ಲಿ ಸೇರಿದಾಗ ಚಿಕಿತ್ಸೆ ನೀಡಿದರೂ ಪ್ರಯೋಜನವಾಗುವುದಿಲ್ಲ. ಕ್ಯಾನ್ಸರ್, ಮಧುಮೇಹಿಗಳು, ಕಿಡ್ನಿ ಸಮಸ್ಯೆ ಇರುವವರಿಗೆ ಯೆಲ್ಲೋ ಫಂಗಸ್ ತಗುಲಿದ್ದರೆ ಅಪಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನಲಾಗಿದೆ.
ಆರಂಭದಲ್ಲೇ ಪತ್ತೆ ಹಚ್ಚಿದರೆ ಚಿಕಿತ್ಸೆ ನೀಡಿ ಗುಣಪಡಿಸಬಹುದಾಗಿದೆ. ಹಳದಿ ಫಂಗಸ್ ರೋಗಿಗಳ ಜತೆ ನೇರ ಸಂಪರ್ಕಕ್ಕೆ ಬಂದರೆ ಗಾಯದ ಕೀವು ಮತ್ತೊಬ್ಬರಿಗೆ ಸೋಕಿದರೆ ಹಳದಿ ಫಂಗಸ್ ಬಹುಬೇಗನೆ ಮತ್ತೊಬ್ಬರಿಗೆ ತಗುಲುತ್ತದೆ. ಶೇಕಡ 70 ರಿಂದ 80 ರಷ್ಟು ಹರಡಿದ್ದರೂ ಚಿಕಿತ್ಸೆ ನೀಡಿ ಅಂತಹ ರೋಗಿಗಳಿಗೆ ಉಳಿಸಬಹುದಾಗಿದೆ. ಆದರೆ, ಕೊರೋನಾ ಸಂದರ್ಭದಲ್ಲಿ ಕಷ್ಟಸಾಧ್ಯ. 50 ರಿಂದ 60 ವರ್ಷ ಮೇಲ್ಪಟ್ಟವರಿಗೆ ಅಪಾಯ ಹೆಚ್ಚಾಗಿರುತ್ತದೆ ಎಂದು ಇಂಟರ್ ನಲ್ ಮೆಡಿಸನ್ ತಜ್ಞ ಡಾ.ಜೆ.ಎಂ. ಮಹೇಶ್ ಕುಮಾರ್ ಹೇಳಿದ್ದಾರೆ.