ರಾಜ್ಯದಲ್ಲಿ ಉಪಚುನಾವಣೆ ಕಾವು ರಂಗೇರಿದೆ. ಹಾನಗಲ್ನಲ್ಲಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.
ಸಂಪೂರ್ಣ ದೇಶವೇ ನರೇಂದ್ರ ಮೋದಿಯವರನ್ನು ಹಾಡಿಹೊಗಳುತ್ತದೆ. ಆದರೆ ವಿರೋಧ ಪಕ್ಷದವರು ಮಾತ್ರ ಪ್ರಧಾನಿ ಮೋದಿಯ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಇದಕ್ಕೆ ನಿಮಗೆ ಜನರೇ ಪಾಠ ಕಲಿಸುತ್ತಾರೆ ಎಂದು ಹೇಳುವ ಮೂಲಕ ಡಿಕೆಶಿ ಹಾಗೂ ಸಿದ್ದರಾಮಯ್ಯರಿಗೆ ಟಾಂಗ್ ನೀಡಿದ್ರು.
ಕಾಂಗ್ರೆಸ್ ಸ್ನೇಹಿತರೇ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಡ್ರೆಸ್ಗೆ ಇರೋದಿಲ್ಲ. ನಿಮ್ಮ ಮೊಮ್ಮಕ್ಕಳಿಗೂ ಇದನ್ನು ಈಗಲೇ ಹೇಳಿಬಿಡಿ. ಬಿಜೆಪಿ ಪಕ್ಷ ಸೇರಿ ಒಳ್ಳೆಯ ಕೆಲಸ ಮಾಡಿ ಎಂದು ಮೊಮ್ಮಕ್ಕಳಿಗೆ ಹೇಳಿ ಹೋಗಿ. ಸುಖಾಸುಮ್ಮನೇ ಯಾರ ಮೇಲೂ ಟೀಕೆ ಮಾಡಬೇಡಿ. ಗೋಣಿ ಚೀಲದಲ್ಲಿ ಹಣ ಹಂಚುತ್ತಿದ್ದೇವೆ ಎಂದು ಕಾಂಗ್ರೆಸ್ ನಮ್ಮ ಮೇಲೆ ಸುಳ್ಳು ಆಪಾದನೆ ಮಾಡಿದೆ. ಈ ರೀತಿಯ ಅಪವಾದ ಹೊರಿಸಿ ಮತದಾರರಿಗೆ ಅವಮಾನ ಮಾಡಬೇಡಿ ಎಂದು ಕಿಡಿಕಾರಿದ್ರು.