alex Certify ಮುಂದಿನ 40 ವರ್ಷದಲ್ಲಿ ನನ್ನ ಸ್ಥಾನದಲ್ಲಿ ಮಹಿಳೆ ನೇಮಕಗೊಳ್ಳುತ್ತಾರೆ: ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಭವಿಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ 40 ವರ್ಷದಲ್ಲಿ ನನ್ನ ಸ್ಥಾನದಲ್ಲಿ ಮಹಿಳೆ ನೇಮಕಗೊಳ್ಳುತ್ತಾರೆ: ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಭವಿಷ್ಯ

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಮಹಿಳಾ ಕೆಡೆಟ್​ಗಳ ಸೇರ್ಪಡೆಯನ್ನು ಸ್ವಾಗತಿಸಿದ ಭಾರತೀಯ ಸೇನಾ ಮುಖ್ಯಸ್ಥ ಜನರಲ್​ ಎಂ.ಎಂ. ನರವಾಣೆ ಇದು ಸಶಸ್ತ್ರ ಪಡೆಗಳಲ್ಲಿ ಲಿಂಗ ಸಮಾನತೆಯತ್ತ ಇಟ್ಟ ಮೊದಲ ಹೆಜ್ಜೆಯಾಗಿದೆ ಎಂದು ವರ್ಣಿಸಿದ್ದಾರೆ.

ಪುಣೆಯಲ್ಲಿ 141ನೇ ಕೋರ್ಸ್​ನ ಪಾಸಿಂಗ್​ ಔಟ್​ ಪರೇಡ್​ ಪರಿಶೀಲಿಸಿದ ಬಳಿಕ ಕೆಡೆಟ್​ಗಳನ್ನು ಉದ್ದೇಶಿಸಿ ಮಾತನಾಡಿದ ಸೇನಾ ಮುಖ್ಯಸ್ಥ ನರವಾಣೆ, ಮಹಿಳೆಯರು ಎನ್​ಡಿಎನಲ್ಲಿ ತರಬೇತಿ ಪಡೆದು ಬಳಿಕ ಸಶಸ್ತ್ರ ಪಡೆಗಳಲ್ಲಿ ಸೇರ್ಪಡೆಗೊಳ್ಳುವುದು ಲಿಂಗ ಸಮಾನತೆಯತ್ತ ಮೊದಲ ಹೆಜ್ಜೆಯಾಗಿದೆ ಎಂದಿದ್ದಾರೆ.

ಮಹಿಳಾ ಕೆಡೆಟ್​ಗಳ ತರಬೇತಿಗಾಗಿ ಮೂಲಸೌಕರ್ಯಗಳಲ್ಲಿ ವಿಭಿನ್ನತೆ ಇರಲಿದೆ. ಆದರೆ ತರಬೇತಿಯು ಪುರುಷರಿಗೆ ನೀಡುವಂತೆಯೇ ಇರಲಿದೆ. ಮಹಿಳೆಯರಿಗೆ ರಕ್ಷಣಾ ತರಬೇತಿ ನೀಡುವುದನ್ನು ಆರಂಭಿಸಿರುವುದರಿಂದ ಮುಂದಿನ 40 ವರ್ಷಗಳಲ್ಲಿ ನೀವು ನನ್ನ ಸ್ಥಾನದಲ್ಲಿ ಮಹಿಳೆಯನ್ನು ನೋಡಲಿದ್ದೀರಿ ಎಂದು ಭವಿಷ್ಯ ನುಡಿದರು.

ಮಹಿಳಾ ಕೆಡೆಟ್​ಗಳಿಗೆ ಎನ್​ಡಿಎ ಪೋರ್ಟಲ್​ಗಳನ್ನು ತೆರೆಯಲಿದ್ದು ಭಾರತೀಯ ಸಶಸ್ತ್ರ ಪಡೆಯು ಅದೇ ನ್ಯಾಯಯುತ ಹಾಗೂ ವೃತ್ತಿಪರತೆಯೊಂದಿಗೆ ಅವರನ್ನು ಸ್ವಾಗತಿಸುತ್ತೀರಿ ಎಂದು ನಾನು ನಂಬಿದ್ದೇನೆ ಎಂದು ಹೇಳಿದರು.

ಎನ್​ಡಿಎ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಬಗ್ಗೆ ಅಧಿಸೂಚನೆಯನ್ನು ಮುಂದಿನ ವರ್ಷ ಮೇ ತಿಂಗಳಲ್ಲಿ ಹೊರಡಿಸಲಾಗುತ್ತದೆ ಎಂದು ಕಳೆದ ತಿಂಗಳು ರಕ್ಷಣಾ ಸಚಿವಾಲಯ ಸುಪ್ರೀಂ ಕೋರ್ಟ್​ಗೆ ಮಾಹಿತಿ ನೀಡಿದೆ.

ಕೆಡೆಟ್​ ಉದ್ದೇಶಿಸಿ ಮಾತನಾಡಿದ ನರವಾಣೆ, 42 ವರ್ಷಗಳ ಹಿಂದೆ ಇದೇ ಜಾಗದಲ್ಲಿ ನಾನು ಕೆಡೆಟ್​ ಆಗಿ ನಿಂತಿದ್ದಾಗ ಮುಂದೊಂದು ದಿನ ನಾನು ಕೆಡೆಟ್​ ಉದ್ದೇಶಿಸಿ ಭಾಷಣ ಮಾಡುವ ಸಂದರ್ಭ ಬರುತ್ತೆ ಎಂದು ಕಲ್ಪಿಸಿಕೊಂಡಿದ್ದೆ ಎಂದು ಹೇಳುವ ಮೂಲಕ ಹಳೆಯ ದಿನಗಳನ್ನು ನೆನೆದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...