alex Certify ಇಲ್ಲಿದೆ ʼಕೊರೊನಾʼ ಸಮಯದಲ್ಲಿ ಹೆಚ್ಚು ಮಾರಾಟವಾದ ಉತ್ಪನ್ನಗಳ ಲಿಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ʼಕೊರೊನಾʼ ಸಮಯದಲ್ಲಿ ಹೆಚ್ಚು ಮಾರಾಟವಾದ ಉತ್ಪನ್ನಗಳ ಲಿಸ್ಟ್

2020 ರಂತೆ 2021 ರಲ್ಲಿಯೂ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಅದರ ಹಲವಾರು ರೂಪಾಂತರಗಳಿಂದ ಜನರು ಕಂಗಾಲಾಗಿದ್ದಾರೆ. ಕೊರೊನಾದಿಂದ ಬಚಾವಾಗಲು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನರು ಹೊಸ ಹೊಸ ಹೆಲ್ತ್ ಪ್ರೊಡಕ್ಟ್ ಗಳನ್ನು ಖರೀದಿಸಿ ಉಪಯೋಗಿಸುತ್ತಿದ್ದಾರೆ. 2021ರಲ್ಲಿ ಅತಿ ಹೆಚ್ಚು ಮಾರಾಟವಾದ ಹೆಲ್ತ್ ಪ್ರೊಡಕ್ಟ್ ಗಳ ಮಾಹಿತಿ ಇಲ್ಲಿದೆ.

ಕೊರೊನಾ ಮಹಾಮಾರಿಯಿಂದ ಬಚಾವಾಗಲು ಮಾಸ್ಕ್ ಬಹಳ ಉಪಯುಕ್ತವಾಗಿದೆ. ಇದನ್ನು ಬಳಸುವುದರಿಂದ ವಾತಾವರಣದಲ್ಲಿನ ವೈರಸ್, ಸೂಕ್ಷ್ಮಜೀವಿಗಳು ಮತ್ತು ಧೂಳಿನ ಕಣಗಳಿಂದ ರಕ್ಷಣೆ ಸಿಗುತ್ತದೆ. ಮಾಸ್ಕ್ ಇವೆಲ್ಲವನ್ನೂ ಫಿಲ್ಟರ್ ಮಾಡಿ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ. 2021 ರಲ್ಲಂತೂ ಮಾಸ್ಕ್ ಜೀವನದ ಬಹುಮುಖ್ಯ ಅಂಶವೇ ಆಗಿಹೋಗಿದೆ.

ಮಾಸ್ಕ್ ನಂತೆಯೇ ಹ್ಯಾಂಡ್ ಸ್ಯಾನಿಟೈಸರ್ ಕೂಡ ಬಹಳ ಮುಖ್ಯ. ಕೊರೊನಾ ಸಮಯದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಅಧಿಕ ಪ್ರಮಾಣದಲ್ಲಿ ಮಾರಾಟವಾಯ್ತು. ಇದನ್ನು ಬಳಸುವುದರಿಂದ ಕೈಯಲ್ಲಿರುವ ಬ್ಯಾಕ್ಟೀರಿಯಾ, ಧೂಳು ಎಲ್ಲವೂ ಸ್ವಚ್ಛವಾಗುತ್ತವೆ.

ಕೊರೊನಾ ಸಮಯದಲ್ಲಿ ಜನರಲ್ಲಿ ಆಕ್ಸಿಜನ್ ಲೆವಲ್ ಅನ್ನು ಪರೀಕ್ಷೆ ಮಾಡಲಾಗುತ್ತಿತ್ತು. ಆಕ್ಸಿಜನ್ ಲೆವಲ್ ಎಷ್ಟಿದೆಯೆಂದು ತಿಳಿದುಕೊಂಡರೆ ಚಿಕಿತ್ಸೆ ಸುಲಭವಾಗುತ್ತದೆ. ಹಾಗಾಗಿ ಜನರು ತಮ್ಮ ತಮ್ಮ ಮನೆಯಲ್ಲಿಯೇ ಆಕ್ಸಿಜನ್ ಮೀಟರ್ ಇಟ್ಟುಕೊಳ್ಳಲು ಆರಂಭಿಸಿದ್ದಾರೆ. ಇದರಿಂದ ಅದರ ಮಾರಾಟದ ಪ್ರಮಾಣ ಹೆಚ್ಚಾಗಿದೆ.

ಕೊರೊನಾ ಸಂದರ್ಭದಲ್ಲಿ ಅತಿ ಹೆಚ್ಚು ಕೇಳಿಬರ್ತಿರುವುದು ರೋಗ ನಿರೋಧಕ ಶಕ್ತಿ. ವೈದ್ಯರು ಇಮ್ಯೂನಿಟಿ ಬೂಸ್ಟ್ ಮಾಡಲು ಸಲಹೆ ನೀಡುತ್ತಿದ್ದಾರೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಉತ್ಪನ್ನಗಳನ್ನು ಜನರು ಹೆಚ್ಚು ಹೆಚ್ಚು ಖರೀದಿಸಿದ್ದಾರೆ.

ಆರೋಗ್ಯವಂತ ಶರೀರಕ್ಕೆ ಸಾವಯವ ಆಹಾರ ಸೇವನೆ ಮಾಡುವುದು ಒಳ್ಳೆಯದು. ಇದರಿಂದ ಇಮ್ಯೂನಿಟಿ ಕೂಡ  ಬೇಗನೆ ಹೆಚ್ಚುತ್ತದೆ. ಕೊರೊನಾ ವೈರಸ್ ಕಾಣಿಸಿಕೊಂಡ ಮೇಲೆ ಜನರು ಸಾವಯವ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

2021 ರಲ್ಲಿ ಕೊರೊನಾದ ಜೊತೆಗೆ ಡೆಂಗ್ಯು, ಬ್ಲ್ಯಾಕ್ ಫಂಗಸ್, ಓಮಿಕ್ರಾನ್ ನಂತಹ ರೋಗದಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ.  ಇನ್ನು ಕೆಲವರು ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗದೇ ಪ್ರಾಣ ಬಿಟ್ಟಿದ್ದಾರೆ. ತುರ್ತು ಸಂದರ್ಭದಲ್ಲಿ ಹಣದ ಕೊರತೆಯಾಗದಿರಲಿ ಎನ್ನುವ ಕಾರಣಕ್ಕೆ ಅನೇಕರು ಆರೋಗ್ಯ ವಿಮೆ ಖರೀದಿ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...