alex Certify ವರ್ಷಾಂತ್ಯದ ಹಾಲಿಡೇ ಇನ್ನಷ್ಟು ದುಬಾರಿ: ವಿಮಾನ ಟಿಕೆಟ್ ದರಗಳಲ್ಲಿ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷಾಂತ್ಯದ ಹಾಲಿಡೇ ಇನ್ನಷ್ಟು ದುಬಾರಿ: ವಿಮಾನ ಟಿಕೆಟ್ ದರಗಳಲ್ಲಿ ಏರಿಕೆ

ವರ್ಷಾಂತ್ಯದ ಪ್ರವಾಸದ ಪ್ಲಾನ್ ಏನಾದರೂ ನೀವು ಇಟ್ಟುಕೊಂಡಿದ್ದರೆ ಅದಕ್ಕಾಗಿ ನೀವೀಗ ವಿಮಾನ ಪ್ರಯಾಣದ ಟಿಕೆಟ್‌ಗಾಗಿ ಇನ್ನಷ್ಟು ಹೆಚ್ಚಿನ ದುಡ್ಡು ಪೀಕಬೇಕಾಗಿ ಬರಬಹುದು.

ಬೇಡಿಕೆ-ಪೂರೈಕೆಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗದೇ ಇರುವ ಕಾರಣ ಹಾಗೂ ಸರ್ಕಾರದ ಪರೋಕ್ಷ ತೆರಿಗೆ ಜೊತೆಗೆ ರೂಪಾಯಿಯ ಅಪಮೌಲ್ಯೀಕರಣಗಳ ಕಾರಣದಿಂದಾಗಿ ಟಿಕೆಟ್ ದರಗಳು ಏರುತ್ತಲೇ ಸಾಗಲಿವೆ ಎಂದು ಇಂಡಿಗೋ ಸಿಇಓ ರಂಜೊಯ್ ದತ್ತ ತಿಳಿಸಿದ್ದು, ಸಾಂಕ್ರಾಮಿಕದ ಕಾರಣ ಆರ್ಥಿಕ ಹೊಡೆತ ತಿಂದಿರುವ ವಿಮಾನಯಾನ ಸಂಸ್ಥೆಗಳು ಉಳಿಯಬೇಕೆಂದರೆ ಟಿಕೆಟ್ ದರಗಳು ಸ್ಥಿರವಾಗಿರಬೇಕೆಂದು ಹೇಳಿಕೊಂಡಿದ್ದಾರೆ.

ಚಡ್ಡಿ ಧರಿಸಿದ್ದ ಗ್ರಾಹಕನನ್ನು ಶಾಖೆಯಿಂದ ಹೊರಗಟ್ಟಿದ ಎಸ್.ಬಿ.ಐ. ಸಿಬ್ಬಂದಿ ..!

“ಮುಂಗಡ ಬುಕಿಂಗ್ ಮಾಡಿದಲ್ಲಿ ಒಳ್ಳೆಯ ರೇಟ್‌ನಲ್ಲಿ ಟಿಕೆಟ್ ಸಿಗುತ್ತದೆ. ಆದರೆ ಸರಾಸರಿ ದರಗಳು ಅಗತ್ಯವಿದ್ದಾಗ ಅನ್ವಯವಾಗಲೇಬೇಕು, ಇಲ್ಲವಾದಲ್ಲಿ ನಮಗೆ ಉದ್ಯಮವೇ ಇಲ್ಲದಂತಾಗುತ್ತದೆ,” ಎಂದು ದತ್ತ ತಿಳಿಸಿದ್ದಾರೆ.

ಕೋವಿಡ್‌ ಎರಡನೇ ಅಲೆಯಿಂದ ಚೇತರಿಕೆ ಹಾಗೂ ಲಸಿಕಾಕರಣಗಳ ಕಾರಣ ವಿಮಾನಯಾನ ಕ್ಷೇತ್ರವನ್ನು ಸಾರ್ವಜನಿಕರಿಗೆ ಮುಕ್ತವಾಗಿಸುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆಗೆ ತಕ್ಕಂತೆ ಸೇವೆಗಳು ಲಭ್ಯವಾಗುತ್ತಿಲ್ಲ.

ಪ್ರತಿವಾರ ತೀವ್ರಗತಿಯಲ್ಲಿ ಏರುತ್ತಿರುವ ದೇಶೀ ವಿಮಾನಯಾನದ ಬೇಡಿಕೆಯು ಕ್ರಿಸ್ಮಸ್ ಹಾಗೂ ಹೊಸ ವರ್ಷದ ರಜೆಯ ಅವಧಿಯಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ದೇಶದ ವಿವಿಧ ನಗರಗಳಿಂದ ಗೋವಾ, ಉದಯ್ಪುರ, ಪೋರ್ಟ್ ಬ್ಲೇರ್‌ನಂಥ ಹಾಲಿಡೇ ತಾಣಗಳಿಗೆ ವಿಮಾನದ ಟಿಕೆಟ್‌ಗಳ ಬೇಡಿಕೆ ವಿಪರೀತ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...