ಮುಂಬೈಗರ ‘ತೆರೆಕೊ, ಮೆರೆಕೊ’ ಆಡುಭಾಷೆ ಈಗ ಹೊಸತಲ್ಲ. ಮುಂಬೈನ ಸಂಸ್ಕೃತಿಯನ್ನು ತೋರಿಸುವ ಸಾಕಷ್ಟು ಚಲನಚಿತ್ರಗಳು ಬಂದಿವೆ. ಅವರ ಮರಾಠಿ ಉಚ್ಚಾರಣೆ ಮತ್ತು ಭಾಷೆ ಭಾರತೀಯ ಪ್ರೇಕ್ಷಕರಿಗೆ ಬಹಳ ಹಿಡಿಸಿವೆ. ಆದರೆ ಒಬ್ಬ ಹೈದರಾಬಾದಿ ಸ್ಥಳೀಯ ಉಪಭಾಷೆಯನ್ನು ಮಾತನಾಡುವುದನ್ನು ನೀವು ಕೇಳಿದ್ದೀರಾ? ಹೈದರಾಬಾದ್ ಎಂದಾಕ್ಷಣ ಬಿರಿಯಾನಿ ನೆನಪಾಗುತ್ತದೆ. ಅದನ್ನು ಹೊರತುಪಡಿಸಿದರೆ ಸ್ಥಳೀಯರು ಮಾತನಾಡುವ ಚಮತ್ಕಾರಿ ಭಾಷೆಗೆ ಇದು ಪ್ರಸಿದ್ಧವಾಗಿದೆ.
ಹಲ್ಲು (ನಿಧಾನ), ನಕ್ಕೊ (ಇಲ್ಲ), ಹೌ (ಹೌದು) ಮುಂತಾದ ಪದಗಳು ದಕ್ಷಿಣ ಭಾರತದ ರಾಜ್ಯದಲ್ಲಿ ಬಳಸಲಾಗುವ ಜನಪ್ರಿಯ ನುಡಿಗಟ್ಟುಗಳ ಭಾಗವಾಗಿದೆ. ಇಂಥದ್ದೇ ಒಂದು ತಮಾಷೆಯ ಫಲಕ ಸ್ಥಳೀಯ ಅಂಗಡಿಯೊಂದಲ್ಲಿ ನೋಡಬಹುದಾಗಿದೆ. ಸಾಲ ಕೇಳಬೇಡಿ, ನಗದು ಕೊಡಿ (ನೋ ಕ್ರೆಡಿಟ್ ಓನ್ಲಿ ಕ್ಯಾಶ್) ಸೂಚನೆಯನ್ನು ಅತ್ಯಂತ ತಮಾಷೆಯ ರೂಪದಲ್ಲಿ ಬರೆಯಲಾಗಿದ್ದು ಅದೀಗ ವೈರಲ್ ಆಗಿದೆ.
ಅದರಲ್ಲಿ ಅವರು “ಆಕೆ ದೇತು, ಲಾಕೆ ದೇತು, ಶಾಮ್ ಮೇ ದೇತು, ಕಲ್ ದೇತು, ಡೈಲಿ ಅತೌ ಭಾಯಿ, ನೈ ಪೆಹಂತೇ ಕ್ಯಾ, ಸರ್ವರ್ ಸ್ಲೋ ಆರಾ” ಎಂದು ಹೈದರಾಬಾದಿಯರು ಹೆಚ್ಚು ಬಳಸುವ ಪದಗಳನ್ನು ಬಳಸಿ ಸಾಲ ಕೇಳಬೇಡಿ ಎಂದು ಬರೆದಿದ್ದು ಇದನ್ನು ಟ್ವಿಟರ್ ಬಳಕೆದಾರರೊಬ್ಬರು ಶೇರ್ ಮಾಡಿದ್ದಾರೆ.
ಆಮೇಲೆ ಕೊಡ್ತೇನೆ, ನಾಳೆ ಕೊಡ್ತೇನೆ, ಸಂಜೆ ಕೊಡ್ತೇನೆ……. ಹೀಗೆ ಆಗ, ಈಗ ಅನ್ನದೇ ಕೂಡಲೇ ದುಡ್ಡು ಕೊಟ್ಟು ಸಾಲ ಕೇಳದೆ ಸಾಮಗ್ರಿ ತೆಗೆದುಕೊಂಡು ಹೋಗಿ ಎನ್ನಲು ಸ್ಥಳೀಯ ಭಾಷೆಯನ್ನು ಉಪಯೋಗಿಸಿರುವ ತಮಾಷೆಯ ಫಲಕ ನೆಟ್ಟಿಗರನ್ನು ತಮಾಷೆಯಲ್ಲಿ ತೇಲಿಸುತ್ತಿದೆ.