ದಾವಣಗೆರೆ: ಬಿಜೆಪಿ ರೆಬಲ್ ನಾಯಕರ ಬಣ ಮತ್ತೆ ದೆಹಲಿ ಪ್ರವಾಸಕ್ಕೆ ಸಜ್ಜಾಗಿದೆ. ಯತ್ನಾಳ್ ಬಣದ ಟೀಂ ದಾವಣಗೆರೆಯಲ್ಲಿ ಬೀಡುಬಿಟ್ಟಿದ್ದು, ಜೆಎಂಐಟಿ ಅತಿಥಿ ಗೃಹದಲ್ಲಿ ಎರಡನೇ ಸುತ್ತಿನ ಸಭೆ ನಡೆಸಿದ್ದಾರೆ.
ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾವು ಮತ್ತೆ ದೆಹಲಿಗೆ ಹೋಗುತ್ತೇವೆ. ನಮ್ಮ ಹೋರಾಟ, ಪ್ರಯತ್ನ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.
ಹಾದಿ ಬೀದಿಯಲ್ಲಿ ಹಂದಿಗಳು ಹೇಳುತ್ತವೆ ಎಂದರೆ ನಾವ್ಯಾಕೆ ಮಾತನಾಡಬೇಕು? ದಾವಣಗೆರೆಯಲ್ಲಿ ಎರಡು ಹಂದಿಗಳಿವೆ. ನಾವು ದೆಹಲಿಗೆ ಹೋಗಿ ಅಲ್ಲಿಯೇ ಮಾತುಕತೆ ನಡೆಸುತ್ತೇವೆ ಎಂದರು.
ಇನ್ನು ಮಾಜಿ ಸಚಿವ ಶ್ರೀರಾಮುಲು ದೆಹಲಿ ಪ್ರವಾಸ ವಿಚಾರವಾಗಿ, ಅವರ ತೀರ್ಮಾನ ಒಳ್ಳೆಯದೇ. ಒಡೆದ ಮನಸುಗಳನ್ನು ಒಂದುಗೂಡಿಸುವುದು ಒಳ್ಳೆಯದು. ರಾಮುಲು ವಿಚಾರವನ್ನು ಸ್ವಾಗತಿಸುತ್ತೇವೆ ಎಂದರು. ನಾವು ಭ್ರಷ್ಟಾಚಾರ, ಕುಟುಂಬ ರಾಜಕಾರಣದ ವಿರುದ್ಧ ಇದ್ದವರು ಎಂದು ಹೇಳಿದರು.