
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್, ಫೋನ್ ಟ್ಯಾಪಿಂಗ್ ಪ್ರಕರಣಗಳ ಚರ್ಚೆ ನಡುವೆಯೇ ವಿಧಾನಸೌಧದ ಅಧಿವೇಶನದ ವೇಳೆ ಕಲಾದಲ್ಲಿ ಹಾರಾಡಿದ ಚೀಟಿ ವಿಚಾರವಾಗಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಅಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಆ ಚೀಟಿ ಯಾರು ಕಳುಹಿಸದರು? ಹೇಗೆ ಬಂತು ಎಂಬುದು ನನಗೆ ಗೊತ್ತಿಲ್ಲ. ಆದರೆ ಆ ಚಿಟಿಯಲ್ಲಿ ಬರೆದಿರುವ ವಿಚಾರ ಹೇಳಿದರೆ ಎರಡೂ ಪಕ್ಷಗಳಲ್ಲಿ ಕ್ರಾಂತಿಯಾಗುತ್ತದೆ ಎಂದು ಹೇಳಿದ್ದಾರೆ.
ಚೀಟಿ ಯಾರು ಕಳುಹಿಸಿದ್ದು ಗೊತ್ತಿಲ್ಲ. ಆದರೆ ಆ ಚೀಟಿಯಲ್ಲಿರುವ ವಿಷಯ ಹೇಳಿದರೆ ಎರಡು ಪಕ್ಷಗಳಲ್ಲಿ ದೊಡ್ಡ ಕ್ರಾಂತಿಯಾಗುತ್ತದೆ. ಎರಡೂ ಪಕ್ಷದ ಮಹಾನಾಯಕರು ಮನೆಗೆ ಹೋಗ್ತಾರೆ. ಮುಂದಿನ ದಿನಗಳ ಚೀಟಿಯಲ್ಲಿದೆ ಎಂಬುದನ್ನು ಹೇಳುತ್ತೇನೆ ಎಂದು ಹೇಳಿದರು.
ಇನ್ನು ಹನಿಟ್ರ್ಯಾಪ್ ವಿಚಾರವಾಗೊ ಸಚಿವ ಕೆ.ಎನ್.ರಾಜಣ್ಣ ಯಾರ ಹೆಸರೂ ಹೇಳಿಲ್ಲ. ಆದರೆ ಸದನದಲ್ಲಿ ಅವರು ಮಾತನಾಡಿದ ದಾಟಿ ನೋಡಿದರೆ ಅವರದ್ದೇ ಪಕ್ಷದ ಮಂತ್ರಿಯೊಬ್ಬರು ಭಾಗಿಯಾಗಿರುವಂತಿದೆ. ಯಾಕೆ ಬ್ಲ್ಯಾಕ್ ಮೇಲ್ ಯತ್ನ ನಡೆದಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಾಗಬೇಕು ಎಂದು ಹೇಳಿದರು.